ಬುಧವಾರ, ನವೆಂಬರ್ 25, 2020
21 °C
ಉಮೇಶ್‌ ಕತ್ತಿ ಬಗ್ಗೆ ಸಹೋದರನ ಹಾಸ್ಯ ಚಟಾಕೆ

ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ: ರಮೇಶ್‌ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಹೋದರ ಉಮೇಶ ಕತ್ತಿ ಮಂತ್ರಿನೇ ಆಗವಲ್ಲ, ಇನ್ನು ಮುಖ್ಯಮಂತ್ರಿ ಹೆಂಗ್ ಆಗ್ತಾನ್ರೀ. ಸಿಪಾಯಿ ಆಗಾಕ್ ಆಗವಲ್ತು, ಇನ್ನು ಡಿಸಿ ಆಗ್ತಾನ?’.

– ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಕೇಳಿದ ಹಾಸ್ಯ ಚಟಾಕಿ ಹಾರಿಸಿದ್ದು ಹೀಗೆ.

ಇಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಉತ್ತರ ಕರ್ನಾಟಕದವರು ಮುಖ್ಯಮಂತ್ರಿ ಆಗಬೇಕು ಎಂದು ಈ ಭಾಗದ ಜನರು ಬಯಸುತ್ತಿದ್ದಾರೆ. ಬಹಳ ವರ್ಷಗಳಿಂದ ಇಲ್ಲಿನವರಿಗೆ ಅವಕಾಶ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಉಮೇಶ ಕತ್ತಿ ಕೂಡ ದನಿ ಎತ್ತಿದ್ದಾರೆ’ ಎಂದರು.

‘ನಾನು ಹಿರಿಯ ರಾಜಕಾರಣಿ, ಅನುಭವ ಜಾಸ್ತಿ ಇದೆ. ಮೂರು ಮುಖ್ಯಮಂತ್ರಿಗಳ ಕೈಯಲ್ಲಿ ಹದಿಮೂರುವರೆ ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಆಗುವ ಅರ್ಹತೆ ಇದೆ. ಮುಂದೊಂದು ದಿನ ಆಗುತ್ತೇನೆ ಎಂದು ಅವರು ಹೇಳುತ್ತಿರುತ್ತಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು