ಹುಕ್ಕೇರಿ: ಪಟ್ಟಣದ ಹಳ್ಳದಕೇರಿಯಲ್ಲಿನ ನೇಕಾರ ಗಲ್ಲಿಯ ಬನಶಂಕರಿದೇವಿಯ 13ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ಸಂಭ್ರಮದಿಂದ ಜರುಗಿತು.

ಮುಂಜಾನೆ ಅರ್ಚಕ ರುದ್ರಯ್ಯ ಇಟಗಿ ಅವರಿಂದ ಅಭಿಷೇಕ, ಮಹಾ ಆರತಿ, ಮಂಗಳಾರತಿ ನಡೆಯಿತು. 9.30 ಗಂಟೆಗೆ ಪ್ರಮುಖ ಮಾರ್ಗದಿಂದ ಕುಂಭ ಹೊತ್ತ ಮಹಿಳೆಯರಿಂದ ಸಕಲ ವಾದ್ಯಮೇಳ ಜತೆ ದೇವಿಯ ಪಲ್ಲಕ್ಕಿ ಉತ್ಸವ ಜರುಗಿತು. ವಾದ್ಯ ನುಡಿಸುವವರ ಮೈಮೇಲೆ ಚುರುಮರಿ ಎಸೆದು ಯುವಕರು ಸಂತಸ ಪಟ್ಟರು. ವಾದ್ಯದವರು ಹಾಕಿದ ಟೋಪಿ, ರುಮಾಲಿಗೆ ನೂರರ ನೋಟು ತುರುಕಿ ಹುರುದುಂಬಿಸಿದರು. ಕೇಕೆ ಕೇಕೆ ಹಾಕುತ್ತ, ಕುಣಿಯುತ್ತ ಕುಂಭ ಮೇಳದಲ್ಲಿ ಪಾಲ್ಗೊಂಡರು.

ಸಮಾಜದ ಮುಖಂಡರಾದ ಮಹಾದೇವ ದಡ್ಡಿಮನಿ, ಸಾವಂತ ದಡ್ಡಿಮನಿ, ಮಹಾದೇವ ಸುಲದಾಳಿ, ಶಶಿಕಾಂತ ದಡ್ಡಿಮನಿ, ಉಮೇಶ್ ದಡ್ಡಿಮನಿ, ಡಿ.ಎಲ್.ಕುಲಕರ್ಣಿ, ಸಂಜು ಮುತಾಲಿಕ, ಅಶೋಕ ನಾಯಿಕ, ದುರದುಂಡಿ ನಾಯಿಕ, ಗುರು ಚಿಕ್ಕೋಡಿ, ಕಿರಣ ಶಿವಮೊಗ್ಗಿಮಠ, ಬಸವರಾಜ ಹೊನ್ನಿಮನಿ, ಸುಭಾಸ ಅಲಗರಾವುತ್, ಅಪ್ಪಾಸಾಬ ಕೋಠಿವಾಲೆ, ಉಮೇಶ್ ದಡ್ಡಿಮನಿ, ಈರಪ್ಪ ಮಗದುಮ್ಮ, ಹೇಂಮತ ಮದಿಹಳ್ಳಿ ಸೇರಿ ನೂರಾರು ಮಹಿಳೆಯರು ಭಕ್ತರು ಭಾಗವಹಿಸಿದ್ದರು. ಆಗಮಿಸಿದ್ದ ನೂರಾರು ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.