ಬೆಳಗಾವಿ: ‘ಹೊಟ್ಟೆ ಹಸಿವು ವ್ಯಕ್ತಿಯನ್ನು ಜೀವಂತವಾಗಿ ಇರಿಸಿದರೆ, ಆತ್ಮದ ಹಸಿವು ವ್ಯಕ್ತಿಯನ್ನು ಅಮರರನ್ನಾಗಿಸುತ್ತದೆ. ಹಾಗಾಗಿ ಹೊಟ್ಟೆ ಹಸಿವಿಗಿಂತ ಆತ್ಮದ ಹಸಿವು ಮುಖ್ಯ’ ಎಂದು ಉಪನ್ಯಾಸಕ ಪ್ರಕಾಶ ಕಮತಿ ಅಭಿಪ್ರಾಯಪಟ್ಟರು.

ಇಲ್ಲಿನ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸ್ವಾಮಿ ವಿವೇಕಾನಂದರು ಭಾರತೀಯರಲ್ಲಿ ಆತ್ಮಜಾಗೃತಿ ಮೂಡಿಸಿ, ಜಿಡ್ಡುಗಟ್ಟಿದ ಭಾರತೀಯರ ಮನಸ್ಸಿಗೆ ನವಚೈತನ್ಯ, ಸ್ವಾಭಿಮಾನ ತುಂಬಿದರು’ ಎಂದರು.

ಸಾಮಾಜಿಕ ಕಾರ್ಯಕರ್ತ ಸುರೇಶ ಯಾದವ, ‘ಸ್ವಾಮಿ ವಿವೇಕಾನಂದರು ಭಾರತವನ್ನು ಬೆಳಗಿದ ಮಹಾನ್ ಸಂತ’ ಎಂದು ಹೇಳಿದರು.

ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಅಂಜನಕುಮಾರ ಗಂಡಗುದರಿ, ರಾಜೇಶ ಗೌಡ, ಸತೀಶ ಮನ್ನಿಕೇರಿ, ಆನಂದ ಶೆಟ್ಟಿ, ಭಾರತಿ ಶೆಟ್ಟಿಗಾರ, ರೂಪಾ ಮಗದುಮ್ಮ, ಗಣೇಶ ಮರಕಲ, ಭೈರೋಬಾ ಕಾಂಬಳೆ ಭಾಗವಹಿಸಿದ್ದರು. ಕಾರ್ಯದರ್ಶಿ ವಿಶಾಲ ಪಾಟೀಲ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.