ಸೋಮವಾರ, ಸೆಪ್ಟೆಂಬರ್ 26, 2022
20 °C

ಸವದತ್ತಿ: ಶೀಲ ಶಂಕಿಸಿ ಪತ್ನಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸವದತ್ತಿ (ಬೆಳಗಾವಿ): ಪಟ್ಟಣದಲ್ಲಿ ಗುರುವಾರ ಪತ್ನಿಯ ಶೀಲ ಶಂಕಿಸಿದ ಪತಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ್ದಾನೆ.

ಶಬಾನಾ ಗೊರವನಕೊಳ್ಳ (28) ಕೊಲೆಯಾದವರು. ಮೆಹಬೂಬಸಾಬ್ ಗರೀಬ್‌ಸಾಬ್ ಗೊರವನಕೊಳ್ಳ ಆರೋಪಿ.

ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಸಂಶಯದ ಕಾರಣ ದಂಪತಿ ಮಧ್ಯೆ ಪದೇಪದೇ ತಂಟೆ ನಡೆಯುತ್ತಿತ್ತು. ಇದರಿಂದ ಬೇಸತ್ತು ಶಬಾನಾ ಅವರು ಪತಿಯಿಂದ ದೂರವಾಗಿ ತಮ್ಮ  ಮಗಳೊಂದಿಗೆ ಬೇರೆ ಮನೆ ಮಾಡಿದ್ದರು. ಗುರುವಾರ ಬೆಳಿಗ್ಗೆ ಅಲ್ಲಿಗೇ ಬಂದ ಆರೋಪಿ ಹರಿತವಾದ ಆಯುಧದಿಂದ ಇರಿದು ಶಬಾನಾ ಅವರನ್ನು ಕೊಲೆ ಮಾಡಿದ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು