‘ವಿಶ್ವನಾಥ್ ಜೊತೆ ನಾನಿರುತ್ತೇನೆ’
ಬೆಳಗಾವಿ: ‘ವಿಶ್ವನಾಥ್ ಜೊತೆ ನಾನಿರುತ್ತೇನೆ’ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಲ್ಲಿ ಸೋಮವಾರ ತಿಳಿಸಿದರು.
‘ಎ.ಎಚ್. ವಿಶ್ವನಾಥ್ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಂಡಿದ್ದರೂ ಅವರ ಅನರ್ಹತೆ ಮುಂದುವರಿದಿದೆ. ನಾಮನಿರ್ದೇಶನವು ಚುನಾವಣೆಗೆ ಸಮವಲ್ಲ’ ಎಂದು ಹೈಕೋರ್ಟ್ ಹೇಳಿರುವ ಬಗ್ಗೆ ಸಚಿವರು ಮೇಲಿನಂತೆ ಪ್ರತಿಕ್ರಿಯಿಸಿದರು.
‘ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಳೆದ ಡಿಸೆಂಬರ್ನಲ್ಲಿ ಉಪ ಚುನಾವಣಾ ಪ್ರಕ್ರಿಯೆ ಆರಂಭವಾಗಿತ್ತು. ಸ್ಪೀಕರ್ ಅವರ ತೀರ್ಪಿನ ಬಗ್ಗೆ ಕೊನೆ ಗಳಿಗೆಯಲ್ಲಿ ಆದೇಶವಾಯಿತು. ಈ ಕಾರಣದಿಂದಾಗಿ ನಾವು ಮೇಲ್ಮನವಿ ಸಲ್ಲಿಸಲಿಲ್ಲ. ಶೀಘ್ರವೆ ಮಿತ್ರರೆಲ್ಲರೂ ಸಭೆ ನಡೆಸಿ ಚರ್ಚಿಸುತ್ತೇವೆ. ನಮ್ಮಲ್ಲಿ ಒಬ್ಬರಿಗೆ ಅನ್ಯಾಯ ಆಗಿರುವುದರಿಂದ ಎಲ್ಲರೂ ಸೇರುತ್ತೇವೆ’ ಎಂದು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.