ಭಾನುವಾರ, ಜೂನ್ 13, 2021
24 °C

ಐಗಳಿ: ವಿವಿಧೆಡೆ ಸ್ವಾತಂತ್ರ್ಯೋತ್ಸವ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಐಗಳಿ: ಗ್ರಾಮದ ವಿವಿಧೆಡೆ ಶನಿವಾರ 74ನೇ ಸ್ವಾತಂತ್ರ್ಯ ದಿನವನ್ನು ಸರಳವಾಗಿ ಆಚರಿಸಲಾಯಿತು.

ಇಲ್ಲಿನ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕೊರೊನಾ ಯೋಧೆ ಆಶಾ ಕಾರ್ಯಕರ್ತೆ ಗುರುಬಾಯಿ ಚಂ. ನಾಗಮೋತಿ ಧ್ವಜಾರೋಹಣ ನೆರವೇರಿಸಿದರು. ವೈದ್ಯರು, ಪೋಲಿಸರು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಪಂಚಾಯಿತಿ ಸಿಬ್ಬಂದಿ ಹಾಗೂ ಪತ್ರಕರ್ತರನ್ನು ಸತ್ಕರಿಸಲಾಯಿತು.

ಬಸವ ಸಮಿತಿ ಕಾರ್ಯಾಲಯದ ಮುಂದೆ ಅಪ್ಪು ಮಾಳಿ, ಬಸವೇಶ್ವರ ಸಹಕಾರಿ ಸಂಘದ ಮುಂದೆ ನಿರ್ದೇಶಕ ಲಕ್ಷ್ಮಣ ಕಾಗವಾಡ, ಮುರಘೇಂದ್ರ ಬ್ಯಾಂಕ್‌ ಎದುರು ನಿಂಗನಗೌಡ ಪಾಟೀಲ, ಪಶು ಆಸ್ಪತ್ರೆ ಎದುರು ತಾಲ್ಲೂಕು ಪಂಚಾಯಿತಿ ಸದಸ್ಯ ಯಲ್ಲಪ್ಪ ಮಿರ್ಜಿ, ಪಿ.ಕೆ.ಪಿ.ಎಸ್. ಆವರಣದಲ್ಲಿ ನಿರ್ದೇಶಕ ಶಿವನಿಂಗ ಅರಟಾಳ, ಬಿ.ಸಿ.ಎಂ. ಹಾಸ್ಟೆಲ್ ಎದುರು ಮೇಲ್ವಿಚಾರಕ ಕೇದಾರಿ ಬಾನಿ, ಡಿಸಿಸಿ ಬ್ಯಾಂಕ್‌ ಶಾಖೆಯಲ್ಲಿ ಅಪ್ಪಸಾಬ ಮಾಕಾಣಿ, ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಅಧ್ಯಕ್ಷ ಶಹಜಹಾನ ಡೊಂಗರಗಾಂವ, ಪೊಲೀಸ್ ಠಾಣೆ ಮುಂದೆ ಎಸ್‌ಐ ಶಿವರಾಜ ನಾಯಕವಾಡ, ಹೆಸ್ಕಾಂ ಕಾರ್ಯಾಲಯದ ಮುಂದೆ ಹಿರಿಯ ಅಧಿಕಾರಿ ರಾಮಣ್ಣ ಕಲಾರೆ, ಆದರ್ಶ ಶಿಕ್ಷಣ ಸಂಸ್ಥೆಯ ಎದುರು ನಿವೃತ್ತ ಪ್ರಾಚಾರ್ಯ ಎ.ಎಸ್. ನಾಯಿಕ, ಕನ್ನಡ ಸರ್ಕಾರಿ ಶಾಲೆ ಆವರಣದಲ್ಲಿ ಸಿ.ಆರ್.ಸಿ. ಮಹಾಂತೇಶ ಗುಡದಿನ್ನಿ, ಮಲ್ಲಿಕಾರ್ಜುನ ಸಹಕಾರಿ ಸಂಘದ ಮುಂದೆ ಶಿವಪ್ರಸಾದ ತೆಲಸಂಗ ಧ್ವಜಾರೋಹಣ ನೆರವೇರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.