ಶನಿವಾರ, ಜೂನ್ 12, 2021
24 °C

ಹಳ್ಳೂರ: ವಿವಿಧೆಡೆ ಸ್ವಾತಂತ್ರ್ಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಳ್ಳೂರ: ಗ್ರಾಮದ ವಿವಿಧೆಡೆ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಬಸವೇಶ್ವರ ಬ್ಯಾಂಕ್‌ ಆವರಣದಲ್ಲಿ ಅಧ್ಯಕ್ಷ ಕುಮಾರ ಲೋಕಣ್ಣವರ, ಅಂಬೇಡ್ಕರ್ ಭವನದಲ್ಲಿ ಮುಖಂಡ ಹಣಮಂತ ತೇರದಾಳ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಸುರೇಶ ಕತ್ತಿ, ಮಹಾವೀರ ಅರ್ಬನ್ ಬ್ಯಾಂಕ್‌ನಲ್ಲಿ ಅಧ್ಯಕ್ಷ ಮಲ್ಲಪ್ಪ ಛಬ್ಬಿ, ಗ್ರಾಮ ಲೆಕ್ಕಾಧಿಕಾರಿ ಕಾರ್ಯಾಲಯದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಸವಿತಾ ಡಬ್ಬನ್ನವರ, ಜ್ಯೋತಿ ಬ್ಯಾಂಕ್‌ನಲ್ಲಿ ಮುಖಂಡ ಹಣಮಂತ ತೇರದಾಳ, ಕನಕದಾಸ ಸಮುದಾಯ ಭವನದಲ್ಲಿ ಮುಖಂಡ ಇಟ್ಟಪ್ಪ ಮಗದುಮ್ಮ, ಹಳ್ಳದರಂಗ ಸೌಹಾರ್ದ ಸಹಕಾರಿ ಸೊಸೈಟಿಯಲ್ಲಿ ಅಧ್ಯಕ್ಷ ಶಿವಪ್ಪ ಕೌಜಲಗಿ ಧ್ವಜಾರೋಹಣ ನೆರವೇರಿಸಿದರು.

ಮೂಡಲಗಿ ಅರ್ಬನ್ ಬ್ಯಾಂಕ್‌ನಲ್ಲಿ ಮುಖಂಡ ಪ್ರಕಾಶ ಲೋಕಣ್ಣವರ, ಹಳ್ಳದರಂಗ ವಿವಿಧ ಉದ್ದೇಶಗಳ ಬ್ಯಾಂಕ್‌ನಲ್ಲಿ ಮುಖಂಡ ಭೀಮಪ್ಪ ತೇರದಾಳ, ದಾನೇಶ್ವರಿ ಮಹಿಳಾ ಬ್ಯಾಂಕ್‌ನಲ್ಲಿ ಅಧ್ಯಕ್ಷೆ ರಾಬನಬಿ ನದಾಫ್, ಭಾಗ್ಯಲಕ್ಷ್ಮಿ ಅರ್ಬನ್ ಬ್ಯಾಂಕಿನಲ್ಲಿ ಅಧ್ಯಕ್ಷ ಡಾ.ಅಜಿತ ಖಾನಾಪೂರ, ಬಿಕೆಎಂ ಪ್ರೌಢಶಾಲೆಯಲ್ಲಿ ಅಧ್ಯಕ್ಷೆ ಸುನಂದಾ ಕುಲಕರ್ಣಿ, ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ ಶ್ರೀಶೈಲ ಹಿರೇಮಠ, ರಾಣಿ ಚನ್ನಮ್ಮ ಬ್ಯಾಂಕ್‌ನಲ್ಲಿ ಮುಖಂಡ ಶಿವಲಿಂಗಪ್ಪ ಗುರ್ಲಾಪೂರ, ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಿಬ್ಬಂದಿ, ಮಲ್ಲಿಕಾರ್ಜುನ ಸೌಹಾರ್ದ ಸೊಸೈಟಿಯಲ್ಲಿ ಅಧ್ಯಕ್ಷ ಶ್ರೀಶೈಲ ಹಿರೇಮಠ, ಮಹಾಲಕ್ಷ್ಮಿ ಪ್ರಾಥಮಿಕ ಪತ್ತಿನ ಸಂಘದಲ್ಲಿ ಅಧ್ಯಕ್ಷ ಶಿವಪ್ಪ ಅಟಮಟ್ಟಿ ಧ್ವಜಾರೋಹಣ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.