ಬೆಳಗಾವಿ: ‘ಇಂದು ಆಧುನಿಕ ಜೀವನಶೈಲಿಯಿಂದ ಅನೇಕ ದಂಪತಿ ಸ್ವಂತ ಮಕ್ಕಳನ್ನು ಹೊಂದಲು ಸಾಧ್ಯವಾಗುತ್ತಿಲ್ಲ. ಅಂಥವರಿಗೆ ಇನ್ ವಿಟ್ರೊ ಫರ್ಟಿಲೈಸೇಷನ್(ಐವಿಎಫ್) ತಂತ್ರಜ್ಞಾನ ವರದಾನವಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅಭಿಪ್ರಾಯಪಟ್ಟರು.

ಇಲ್ಲಿನ ಕೆಎಲ್ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ವಿಶ್ವ ಐವಿಎಫ್ ದಿನದ ಪ್ರಯುಕ್ತ, ಶುಕ್ರವಾರ ಕೆಎಲ್ಇ ಫರ್ಟಿಲಿಟಿ ಸೆಂಟರ್ ಉದ್ಘಾಟಿಸಿ ಮಾತನಾಡಿದರು.

‘ಈ ಹಿಂದೆ ಮಕ್ಕಳು ಇಲ್ಲದಿರುವುದನ್ನು ಶಾಪವೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ವಿಜ್ಞಾನ ಬೆಳೆದಿದೆ. ಅತ್ಯಾಧುನಿಕ ಸೌಲಭ್ಯ ಹೊಂದಿರುವ ಈ ಕೇಂದ್ರವು ಮಕ್ಕಳಿಲ್ಲದ ದಂಪತಿಯ ಮಗು ಪಡೆಯುವ ಕನಸು ನನಸಾಗಿಸಲು ಸಹಾಯ ಮಾಡುತ್ತದೆ. ಇದರಿಂದ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾದ ಜನರಿಗೆ ಪ್ರಯೋಜನವಾಲಿದೆ’ ಎಂದರು.

‘ಕೆಎಲ್ಇ ಸಂಸ್ಥೆ ಇಂದು ಎಲ್ಲ ರಂಗಗಳಲ್ಲಿ ಮುಂಚೂಣಿಯಲ್ಲಿದೆ. ವಿಶ್ವದಾದ್ಯಂತ ಆರೋಗ್ಯ ಸೇವೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಹಲವು ಪ್ರಧಾನಿಗಳು, ರಾಷ್ಟ್ರಪತಿಗಳು ಭೇಟಿ ನೀಡಿದ ಪ್ರಮುಖ ಸಂಸ್ಥೆ ಇದಾಗಿದೆ. ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ನೇತೃತ್ವದಲ್ಲಿ ಕೆಎಲ್ಇ ಸಂಸ್ಥೆಯ ತಂಡವು 5 ಸಾವಿರ ಅಧಿಕ ಹಾಸಿಗೆಗಳಲ್ಲಿ ಆರೋಗ್ಯ ಸೇವೆ ಒದಗಿಸುತ್ತಿದೆ. 20 ಸಾವಿರಕ್ಕೂ ಅಧಿಕ ಉದ್ಯೋಗಿಗಳು, 1.50 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ನಿರೀಕ್ಷೆ ಪೂರೈಸುತ್ತಿದೆ’ ಎಂದು ಹೇಳಿದರು.

‘ಸಾಮಾಜಿಕ ಬದ್ಧತೆಯ ರಾಜಕಾರಣಿಯಾದ ಪ್ರಭಾಕರ ಕೋರೆ ಸಮಾಜದ ದೊಡ್ಡ ಆಸ್ತಿ. ಅವರು ಕಾರ್ಯಾಧ್ಯಕ್ಷರಾಗುವ ವೇಳೆ, ಕೆಎಲ್ಇ ಸಂಸ್ಥೆ 34 ಅಂಗಸಂಸ್ಥೆ ಹೊಂದಿತ್ತು. ಈಗ 310 ಅಂಗಸಂಸ್ಥೆಗಳಿವೆ. ವೇಗವಾಗಿ ಬೆಳೆಯುತ್ತಿರುವ ಬೆಳಗಾವಿ ಬೆಳವಣಿಗೆಗೆ ಕೆಎಲ್ಇ ಸಂಸ್ಥೆ ತನ್ನದೇಯಾದ ಕೊಡುಗೆ ನೀಡಿದೆ’ ಎಂದು ಶ್ಲಾಘಿಸಿದರು.

ಕೆಎಲ್ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆ್ಯಂಡ್ ರಿಸರ್ಚ್ನ ಕುಲಪತಿ ಡಾ.ನಿತಿನ್ ಗಂಗಾನೆ, ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಎನ್.ಎಸ್.ಮಹಾಂತಶೆಟ್ಟಿ ಇದ್ದರು. ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಕರ್ನಲ್ ಡಾ.ಎಂ.ದಯಾನಂದ ಸ್ವಾಗತಿಸಿದರು. ಕೆಎಲ್ಇ ಫರ್ಟಿಲಿಟಿ ಸೆಂಟರ್ ವೈಜ್ಞಾನಿಕ ನಿರ್ದೇಶಕ ಡಾ.ನಂದೇಶ್ವರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬೆಂಗಳೂರಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ:

ಅಧ್ಯಕ್ಷತೆ ವಹಿಸಿದ್ದ ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ‘ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ 7 ಎಕರೆ ಜಾಗದಲ್ಲಿ 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಹುಬ್ಬಳ್ಳಿಯಲ್ಲಿ ಆಸ್ಪತ್ರೆ ಉದ್ಘಾಟನೆಗೊಳ್ಳಲಿದೆ’ ಎಂದು ತಿಳಿಸಿದರು. ‘ಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯವಿರುವ ಅತ್ಯಾಧುನಿಕ ಸೌಲಭ್ಯ ಮತ್ತು ಸಿಬ್ಬಂದಿ ಪಡೆದ ನಂತರವೇ ಫರ್ಟಿಲಿಟಿ ಸೆಂಟರ್ ಆರಂಭಿಸಿದ್ದೇವೆ. ಹಲವು ಐಪಿಎಫ್ ಸೆಂಟರ್ಗಳು ಹಣ ಮಾಡುವ ಉದ್ದೇಶದಿಂದ ತಲೆ ಎತ್ತಿ ಅಪಖ್ಯಾತಿಗೆ ತುತ್ತಾಗಿವೆ. ಆದರೆ ನಾವು ಜನರಿಗಾಗಿ ಜನಸೇವೆಗಾಗಿ ಈ ಕೇಂದ್ರ ಆರಂಭಿಸಿದ್ದೇವೆ’ ಎಂದರು. ‘ಕೆಎಲ್ಇ ಸಂಸ್ಥೆಯ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ವಿದೇಶಗಳಿಂದ ಜನರು ಬರುತ್ತಿದ್ದಾರೆ. ಆಯುರ್ವೇದಕ್ಕೆ ಪುನರ್ಜನ್ಮ ನೀಡಲು ಪ್ರಯತ್ನಿಸಲಾಗುತ್ತಿದೆ’ ಎಂದು ತಿಳಿಸಿದರು.

‘ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿ’

‘ಇಂದು ಬೆಳಗಾವಿ ಕರ್ನಾಟಕದಲ್ಲೇ ಉಳಿಯಲು ಕೆಎಲ್ಇ ಸಂಸ್ಥೆಯ ಕೊಡುಗೆಯೂ ಇದೆ. ಆದರೆ ರಾಜ್ಯ ಸರ್ಕಾರದಿಂದ ನಮಗೆ ನಿರೀಕ್ಷಿತ ಬೆಂಬಲ ಸಿಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರವು ನವಿ ಮುಂಬೈ ಬಳಿ ಪಾಮ್ ಬೀಚ್ನಲ್ಲಿ ನಮಗೆ ಮೂರು ಎಕರೆ ಭೂಮಿ ನೀಡಿದ್ದು ₹18 ಕೋಟಿ ವೆಚ್ಚದಲ್ಲಿ ಹವಾನಿಯಂತ್ರಿತ ಶಾಲೆ ಆರಂಭವಾಗಲಿದೆ’ ಎಂದು ಕೋರೆ ಹೇಳಿದರು. ‘ರಾಜ್ಯ ಸರ್ಕಾರಕ್ಕೆ ಕೆಎಲ್ಇ ಸಂಸ್ಥೆ ಬಗ್ಗೆ ಅಲರ್ಜಿ ಇರುವಂತೆ ಕಾಣುತ್ತಿದೆ. ನಮಗೆ ಸಹಾಯ ಮಾಡಲು ಹೆಬ್ಬಾಳಕರ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಒತ್ತಾಯಿಸಿದರು. ‘ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಿಸಿದ ಸೂಪರ್ಸ್ಪೆಷಾಲಿಟಿ ಆಸ್ಪತ್ರೆಯನ್ನು ನಮಗೆ ವಹಿಸಿಕೊಟ್ಟರೆ ಮುನ್ನಡೆಸಲು ಸಿದ್ಧ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.