ಭಾನುವಾರ, ಡಿಸೆಂಬರ್ 8, 2019
25 °C

ಪೊರಕೆಗಳನ್ನು ಪ್ರದರ್ಶಿಸಿ ಜಾಡಮಾಲಿಗಳ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಳಗಾವಿ: ‘ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮನ್ನು ಡಿ ದರ್ಜೆ ನೌಕರರೆಂದು ಪರಿಗಣಿಸಬೇಕು ಹಾಗೂ ಸೇವಾಗುತ್ತಿಗೆ ಆದೇಶ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಜಾಡಮಾಲಿ (ಸ್ವೀಪರ್‌ಗಳು)ಗಳು ಬುಧವಾರ ಸುವರ್ಣ ವಿಧಾನಸೌಧದ ಬಳಿಯ ಸುವರ್ಣ ಗಾರ್ಡನ್‌ನಲ್ಲಿ ಪೊರಕೆಗಳನ್ನು ಪ್ರದರ್ಶಿಸಿ ಧರಣಿ ನಡೆಸಿದರು.

‘ಪೊಲೀಸ್ ಇಲಾಖೆ ಕಚೇರಿಗಳು ಹಾಗೂ ಠಾಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 904 ಜಾಡಮಾಲಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿರುವುದರಿಂದ ಅವರು ಹಾಗೂ ಕುಟುಂಬದವರ ಬದುಕು ಅತಂತ್ರವಾಗಿದೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದವರು ಸಂಪೂರ್ಣ ಸೇವಾ ಭದ್ರತೆಯನ್ನು ಕಳೆದುಕೊಂಡಿದ್ದಾರೆ. ಸರ್ಕಾರವು ನಮ್ಮನ್ನು ಎಂದು ಕಾಯಂ ಮಾಡುತ್ತದೆ ಎಂದು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ’ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್‌ ಕೂಡ ನಮ್ಮಂಥ ನೌಕರರ ಪರವಾಗಿಯೇ ಇದೆ. ಆದರೆ, ಈ ತೀರ್ಪಿಗೆ ವಿರುದ್ಧವಾಗಿ ಸರ್ಕಾರವು ನಡೆದುಕೊಳ್ಳುತ್ತಿದೆ. ಜೀತಪದ್ಧತಿ ಪ್ರೋತ್ಸಾಹಿಸುವ ದಮನಕಾರಿ ಧೋರಣೆಯನ್ನು ತಾಳುವುದು ಸರಿಯಲ್ಲ. ಹೀಗಾಗಿ ಸರ್ಕಾರವು ವಜಾ ಆದೇಶ ರದ್ದುಗೊಳಿಸಬೇಕು. ನಮ್ಮನ್ನು ಕಾಯಂಗೊಳಿಸಬೇಕು. ಇತರ ನೌಕರರಿಗೆ ದೊರೆಯುವ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು