ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳೇಭಾವಿ: ಮಹಾಲಕ್ಷ್ಮಿ ಜಾತ್ರೆಗೆ ಕಿರುಚಿತ್ರ ನಿರ್ಮಾಣ

ಸುಳೇಭಾವಿ: ಗ್ರಾಮದ ಯುವಕರಿಂದ ವಿನೂತನ ಪ್ರಯೋಗ
Last Updated 26 ಜನವರಿ 2020, 14:35 IST
ಅಕ್ಷರ ಗಾತ್ರ

ಬೆಳಗಾವಿ: ‘ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ಸುಳೇಭಾವಿ ಮಹಾಲಕ್ಷ್ಮೀದೇವಿಯ ಮಹಾತ್ಮೆ ಸಾರುವ ಕಿರುಚಿತ್ರ ನಿರ್ಮಾಣವಾಗುತ್ತಿದ್ದು, ಈ ಮೂಲಕ ದೇವಿಯ ಶಕ್ತಿ ಇನ್ನಷ್ಟು ಪಸರಿಸಲಿ’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಗಜಾನನ ನಾಯ್ಕ ಹೇಳಿದರು.

ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಶಿವಶೋಭಾ ಸಿನಿ ಫ್ಯಾಕ್ಟರಿ ನಿರ್ಮಿಸುತ್ತಿರುವ ‘ಜಾತ್ರಿ ಬಂತು’ ಎಂಬ ಕಿರುಚಿತ್ರ ಚಿತ್ರೀಕರಣಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ಜಾತ್ರೆ ಹಿನ್ನೆಲೆಯಲ್ಲಿ ಅತ್ಯಂತ ಅದ್ಧೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರ ವಿನೂತನ ಪ್ರಯೋಗವಾಗಲಿದೆ. ಕಲ್ಪವೃಕ್ಷ, ಕಾಮಧೇನು ಎನಿಸಿರುವ ಮಹಾಲಕ್ಷ್ಮೀದೇವಿಯ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷದ ಜಾತ್ರೆಯಂತೂ ಅತ್ಯಂತ ಅದ್ಧೂರಿಯಾಗಿ ನೆರವೇರಲಿದೆ. ಗ್ರಾಮದ ಯುವಕರು ಮಾಡುತ್ತಿರುವ ಕಿರುಚಿತ್ರ ಯಶಸ್ವಿಯಾಗಲಿ’ ಎಂದು ಹಾರೈಸಿದರು.

ಕಾಂಗ್ರೆಸ್ ಮುಖಂಡ ಕಿರಣಸಿಂಗ್ ರಜಪೂತ ಮಾತನಾಡಿ, ‘ದೇವಿಯ ಮಹಿಮೆ ಸಾರುವ ಹಾಗೂ ಸಿನಿಮಾ ಮಾದರಿಯಲ್ಲಿಯೇ ನಿರ್ಮಾಣವಾಗುತ್ತಿರುವ ಈ ಚಿತ್ರ ಯಶಸ್ಸು ಕಾಣಲಿ. ಸ್ಥಳೀಯ ಕಲಾವಿದರು ಅಭಿನಯಿಸಿದ ಈ ಚಿತ್ರ ಮಾದರಿಯಾಗಿ ಹೊರಹೊಮ್ಮಲಿ’ ಎಂದು ಆಶಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಸನಗೌಡ ಹುಂಕರಿ ಪಾಟೀಲ ಕ್ಯಾಮರಾಕ್ಕೆ ಚಾಲನೆ ನೀಡಿದರು. ಬಿಜೆಪಿ ಮುಖಂಡ ಭೀಮಶಿ ಭರಮನ್ನವರ ಸ್ಕ್ರಿಪ್ಟ್ ಪೂಜೆ ನೆರವೇರಿಸಿದರು. ಯುವ ಪತ್ರಕರ್ತ ಭೈರೋಬಾ ಕಾಂಬಳೆ ಅವರ ಕತೆ, ಚಿತ್ರಕತೆ, ಸಂಭಾಷಣೆ, ಚಂದೂರ ಮಾರುತಿ ನಿರ್ದೇಶಿಸಿದ, ಜೀವಾ ಪ್ರಸನ್ನ ಅವರ ಛಾಯಾಗ್ರಹಣ ಹೊಂದಿರುವ ಕಿರುಚಿತ್ರದಲ್ಲಿ ಕಲಾವಿದರಾದ ಬಾಬಾಸಾಹೇಬ ಕಾಂಬಳೆ, ಸ್ನೇಹಾ ನಾಗನಗೌಡ, ಸಮೃದ್ಧ ಕಳಸಪ್ಪಗೋಳ, ಬಾಲರಾಜ ಭಜಂತ್ರಿ ಅಭಿನಯಿಸುತ್ತಿದ್ದಾರೆ.

ಮಹಾಲಕ್ಷ್ಮೀ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ಅಧ್ಯಕ್ಷ ದೇವಣ್ಣ ಬಂಗೇನ್ನವರ, ಮುಖಂಡರಾದ ನಾನಪ್ಪ ಪಾರ್ವತಿ, ಲಕ್ಷ್ಮಣ ಯಮೋಜಿ, ದ್ಯಾಮಣ್ಣ ಮುರಾರಿ, ಅಣ್ಣಪ್ಪ ಪಾಟೀಲ, ಮಹೇಶ ಸುಗಣೆನ್ನವರ, ಗಣಪತಿ ಹೊಸಮನಿ, ಕಲ್ಲಪ್ಪ ರಾಗಿ, ವಿಠ್ಠಲ ಬಂಡಿಗಣಿ, ಕಲ್ಲಪ್ಪ ರಾಗಿ, ಮುರುಗೇಶ ಶಿವಪೂಜಿ, ಶಶಿಕಾಂತ ಸಂಗೊಳ್ಳಿ, ನಿಂಗಪ್ಪ ಚೌಗಲೆ, ಮಾರುತಿ ರವುಳಗೌಡ್ರ, ಕಲ್ಮೇಶ ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT