ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ತೈಲ ದರ ಏರಿಕೆ: ಜೆಸಿಬಿ ಬಾಡಿಗೆ ಹೆಚ್ಚಳ’

Last Updated 12 ಫೆಬ್ರುವರಿ 2021, 13:39 IST
ಅಕ್ಷರ ಗಾತ್ರ

ಮುಗಳಖೋಡ (ಮುಗಳಖೋಡ): ‘ಕೇಂದ್ರ ಸರ್ಕಾರವು ತೈಲ ದರವನ್ನು ನಿರಂತರವಾಗಿ ಏರಿಕೆ ಮಾಡುತ್ತಿರುವುದರಿಂದಾಗಿ ಮುಗಳಖೋಡ, ಹಾರೂಗೇರಿ, ಪಾಲಬಾವಿ, ಕಣದಾಳ ಹಾಗೂ ಹಿಡಕಲ್ ಗ್ರಾಮಗಳ 20ಕ್ಕೂ ಹೆಚ್ಚು ಜೆಸಿಬಿಗಳ (ಎಕ್ಸ್‌ಕವೇಟರ್ಸ್) ಮಾಲೀಕರು ನಷ್ಟ ಅನುಭವಿಸುತ್ತಿದ್ದೇವೆ’ ಎಂದು ಜೆಸಿಬಿ ಸಂಘದ ಅಧ್ಯಕ್ಷ ಗೌಡಪ್ಪ ಖೇತಗೌಡರ ತಿಳಿಸಿದರು.

ಪಟ್ಟಣದ ಯಲ್ಲಾಲಿಂಗೇಶ್ವರ ಮಹಾರಾಜರ ಮಠದ ಆವರಣದಲ್ಲಿ ಜೆಸಿಬಿಗಳ ಸಮೇತ ಶುಕ್ರವಾರ ನಡೆಸಿದ ಮುಷ್ಕರದಲ್ಲಿ ಮಾತನಾಡಿದ ಅವರು, ‘ಲೀಟರ್ ಡೀಸೆಲ್ ದರ ₹ 70 ಇದ್ದಾಗ ಜೆಸಿಬಿಗಳಿಗೆ ₹ 800 ಬಾಡಿಗೆ ತೆಗೆದುಕೊಳ್ಳುತ್ತಿದ್ದೆವು. ಆದರೆ, ₹ 84ಕ್ಕೆ ಹೆಚ್ಚಿಸಿದ್ದರಿಂದ ನಷ್ಟ ಅನುಭವಿಸುವಂತಾಗಿದೆ. ಬಿಡಿ ಭಾಗಗಳ ಮೇಲೆ ಶೇ 10ರಷ್ಟು ಜಿಎಸ್‌ಟಿ ಹಾಕಿರುವುದರಿಂದ ಹೆಚ್ಚಿನ ಹಣ ವ್ಯಯಿಸಬೇಕಾಗಿದೆ. ಎರಡು ವರ್ಷಗಳ ಹಿಂದೆ ₹ 24 ಲಕ್ಷವಿದ್ದ ಜೆಸಿಬಿ ಬೆಲೆ ಈಗ ₹ 36.60 ಲಕ್ಷಕ್ಕೆ ಏರಿದೆ. ಬ್ಯಾಂಕ್ ಸಾಲದ ಕಂತುಗಳನ್ನು ಸಾಲ ಪಡೆದು ತುಂಬುವಂತಾಗಿದೆ’ ಎಂದು ಮಾಹಿತಿ ನೀಡಿದರು.

‘ತಾಸಿಗೆ ₹ 800 ಇದ್ದ ಬಾಡಿಗೆಯನ್ನು ₹ 1ಸಾವಿರಕ್ಕೆ ಏರಿಕೆ ಮಾಡಿದ್ದೇವೆ. ₹ 120 ಇದ್ದ ಲೋಡಿಂಗ್ ಬಾಡಿಗೆಯನ್ನು ₹ 150ಕ್ಕೆ ಹೆಚ್ಚಿಸಿದ್ದೇವೆ. ಇದರಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಕಡಿಮೆ ಪಡೆದರೆ ಅಂಥವರಿಗೆ ಸಂಘದಿಂದ ₹ 10ಸಾವಿರ ದಂಡ ವಿಧಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಂಘದ ಸಂಗಪ್ಪ ಬಾಳೋಜಿ, ಗೌಡಪ್ಪ ಖೇತಗೌಡರ, ಭರಮು ಹಳಿಂಗಳಿ, ಯಲ್ಲಾಲಿಂಗ ಬಂಡಿಗಣಿ, ಸಿದ್ರಾಮ ಶೇಗುಣಸಿ, ಯಮನಪ್ಪ ಮಾದಗೊಂಡ, ವಿಠ್ಠಲ ಮೆಕ್ಕಳಕಿ, ಉಮೇಶ ಎತ್ತಿನಮನಿ, ವಿಠ್ಠಲ ಹೊಸುರ, ಪರಶುರಾಮ ಯರಗಟ್ಟಿ, ಗಣಾಧರ ಬಾಬಣ್ಣವರ, ಗುರು ಈಟಿ, ರವಿ ಕೊಕಟನೂರ, ಹಣಮಂತ ಕೊಪ್ಪದ, ಅಲ್ಲಪ್ಪ ಬೆಳಗಲಿ, ಕಾಡಪ್ಪ ಗೊಂಡಿ ಹಾಗೂ ಬಸು ಹೊನ್ನಳದಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT