ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗ ಮೇಳ; 400 ಉದ್ಯೋಗ ಆಕಾಂಕ್ಷಿಗಳು ಭಾಗಿ

Published : 22 ಸೆಪ್ಟೆಂಬರ್ 2024, 7:23 IST
Last Updated : 22 ಸೆಪ್ಟೆಂಬರ್ 2024, 7:23 IST
ಫಾಲೋ ಮಾಡಿ
Comments

ಮೂಡಲಗಿ: ‘ಕೈಗಾರಿಕೆ ಹಾಗೂ ವಿವಿಧ ಕಂಪನಿಗಳಲ್ಲಿ ಜ್ಞಾನ ಮತ್ತು ಕೌಶಲತೆಗೆ ಅನುಗುಣವಾಗಿ ಉದ್ಯೋಗ ದೊರೆಯುತ್ತಿದ್ದು, ಉದ್ಯೋಗ ಆಕಾಂಕ್ಷಿಗಳು ಅಂಥ ಅವಕಾಶಗಳನ್ನು ಪಡೆದುಕೊಳ್ಳಬೇಕು’ ಎಂದು ಬೆಂಗಳೂರಿನ ಕ್ಯಾಡ್‌ಮ್ಯಾಕ್ಸ್ ಎಜ್ಯುಕೇಶನ್‌ ಕಂಪನಿಯ ಸಂಪನ್ಮೂಲ ವ್ಯವಸ್ಥಾಪಕ ಪ್ರಕಾಶ ಹೇಳಿದರು.

ಇಲ್ಲಿಯ ಚೈತನ್ಯ ಸೋಸಿಯಲ್‌ ವೆಲ್ಪೆರ್‌ ಸೊಸೈಟಿಯ ಚೈತನ್ಯ ಐಟಿಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಬೃಹತ್‌ ಉದ್ಯೋಗ ಮೇಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಮತ್ತು ಸ್ಥಳೀಯ ಉದ್ಯೋಗಗಳನ್ನು ಅರಸುತ್ತಾ ಕುಳಿತುಕೊಳ್ಳದೆ ಬೇರೆ ಬೇರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಕಂಪನಿಗಳಲ್ಲಿ ಉದ್ಯೋಗದ ಅವಕಾಶಗಳ ಇರುತ್ತವೆ. ಅಂಥ ಅವಕಾಶಗಳ ಮಾಹಿತಿ ನೀಡುವುದೇ ಉದ್ಯೋಗ ಮೇಳದ ಉದ್ದೇಶವಾಗಿದೆ’ ಎಂದರು.

‘ಕ್ಯಾಡ್‌ಮ್ಯಾಕ್ಸ್ ಸಹಯೋಗದಲ್ಲಿ ವಿಶ್ವದ 50ಕ್ಕೂ ಉತ್ತಮ ಕಂಪನಿಗಳಲ್ಲಿ ಉದ್ಯೋಗಗಳಿಗೆ ಅವಕಾಶವಿದೆ. ಅಂಥವುಗಳ ಬಗ್ಗೆ ಗಮನ ನೀಡಿ ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು’ ಎಂದರು.

ಬೆಳಗಾವಿಯ ಫುಕೋಕು ಇಂಡಿಯಾದ ವ್ಯವಸ್ಥಾಪಕ ಸಿದ್ದಣ್ಣ ರೆಂಟೆ, ಐಟಿಐ ಕಾಲೇಜು ಪ್ರಾಚಾರ್ಯ ಎಸ್.ಬಿ. ಕುಳ್ಳೋಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಎಂ. ಕಮದಾಳ, ಶಿಕ್ಷಕ ಸಹಕಾರ ಸಂಘದ ಅಧ್ಯಕ್ಷ ವೈ.ಬಿ. ಪಾಟೀಲ, ವಕೀಲ ಯು.ಆರ್. ಜೋಕಿ, ಉದ್ಯೋಗ ನಿಯೋಜಕ ಟಿ.ಆರ್. ಝಾರೆ, ಎಸ್.ಎಲ್. ಪೂಜೇರಿ ಇದ್ದರು.

400ಕ್ಕೂ ಅಧಿಕ ಸಂಖ್ಯೆಯ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT