ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಭಿವೃದ್ದಿಗಾಗಿ ಬಿಜೆಪಿಯೊಂದಿಗೆ ಕೈ ಜೋಡಿಸಿ: ಬಸವರಾಜ

Published : 10 ಸೆಪ್ಟೆಂಬರ್ 2024, 14:21 IST
Last Updated : 10 ಸೆಪ್ಟೆಂಬರ್ 2024, 14:21 IST
ಫಾಲೋ ಮಾಡಿ
Comments

ಹುಕ್ಕೇರಿ: ದೇಶದ ಸಮಗ್ರ ಅಭಿವೃದ್ದಿಯಲ್ಲಿ ಬಿಜೆಪಿ ಸರ್ಕಾರದ ಸಾಧನೆ ಅಪಾರ. ದೇಶದ ಅಭಿವೃದ್ಧಿಗಾಗಿ ಬಿಜೆಪಿ ಸದಸ್ಯತ್ವ ಪಡೆಯಿರಿ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ ಹೇಳಿದರು.

ಯಮಕನಮರಡಿ ಮತಕ್ಷೇತ್ರದ ವ್ಯಾಪ್ತಿಯ ಗುಟಗುದ್ದಿ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿಯ ‘ಸದಸ್ಯತ್ವ ಅಭಿಯಾನ’ದ ಅಂಗವಾಗಿ ಯಮಕನಮರಡಿ ಮಂಡಲ ಸೋಮವಾರ ಆಯೋಜಿಸಿದ್ದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಉನ್ನತಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಪಕ್ಷವನ್ನು ಬೂತ್‌ಮಟ್ಟದಿಂದ ಸಂಘಟಿಸಬೆಕು ಎಂದರು.

ದಕ್ಷಿಣ ಮಂಡಳದ ಅಧ್ಯಕ್ಷ ಅಪ್ಪಯ್ಯ ಜಾಜರಿ ಮಾತನಾಡಿದರು.

ಈರಪ್ಪ ಪಾಟೀಲ, ಸತೀಶ ಪೂಜೇರಿ, ಬಸವರಾಜ ಲಂಕೆಪ್ಪಗೋಳ, ಬಸವರಾಜ ಪೂಜೇರಿ, ಶೆಟ್ಟಪ್ಪ ಪೂಜೇರಿ, ಬಸವಣ್ಣಿ ಬಳಿಗಾರ, ಬಾಳಯ್ಯ ತವಗಮಠ, ಲಕ್ಕಪ್ಪ ಕರಗುಪ್ಪಿ, ಫಕೀರಪ್ಪ ಲಂಬುನಾಯಿಕ ಸೇರಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT