ಬುಧವಾರ, ಆಗಸ್ಟ್ 12, 2020
21 °C

ಪತ್ರಕರ್ತರೂ ಕೊರೊನಾ ಯೋಧರು: ಅಭಿನವ ಗುರುಲಿಂಗ ಜಂಗಮ ಮಹಾರಾಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಕಮರಿ: ‘ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರು ಕೂಡ ಯೋಧರಂತೆ ಕಾರ್ಯನಿರ್ವಹಿಸಿದ್ದಾರೆ. ಮಾಧ್ಯಮದ ಸೇವೆಯೂ ಪ್ರಮುಖವಾಗಿದೆ’ ಎಂದು ಇಲ್ಲಿನ ರಾಯಲಿಂಗೇಶ್ವರ ಮಠದ ಅಭಿನವ ಗುರುಲಿಂಗ ಜಂಗಮ ಮಹಾರಾಜ ಹೇಳಿದರು.

ಮಠದಲ್ಲಿ ಅಥಣಿ ತಾಲ್ಲೂಕು ಗ್ರಾಮೀಣ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇವರು ಎಲ್ಲರಿಗೂ ಒಂದೊಂದು ವೃತ್ತಿ ನೀಡಿ ಪಾತ್ರಧಾರಿಗಳನ್ನಾಗಿ ಮಾಡಿಕೊಂಡು ಸೂತ್ರವನ್ನು ಇಟ್ಟುಕೊಂಡಿದ್ದಾನೆ. ಆತ ಆಡಿಸಿದಂತೆ ಆಡುವ ನಾವು ಪ್ರಾಮಾಣಿಕವಾಗಿ ಪಾತ್ರ ನಿರ್ವಹಿಸಬೇಕು’ ಎಂದರು.

ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ, ‘ಸಮಾಜದ ಅಂಕುಡೊಂಕುಗಳನ್ನು ತಿದ್ದಲು ಪತ್ರಿಕಾ ಮಾಧ್ಯಮ ಪರಿಣಾಮಕಾರಿ ಸಾಧನವಾಗಿದೆ’ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಶಹಜಹಾನ್ ಡೊಂಗರಗಾಂವ, ‘ಪತ್ರಿಕೆಗಳಿಂದಾಗಿಯೇ ಸಂವಿಧಾನದ ಆಶ್ರಯ ಈಡೇರಿದೆ. ಬೆಳಿಗ್ಗೆ ಪತ್ರಿಕೆ ಓದದಿದ್ದರೆ ಏನೋ ಕಳೆದುಕೊಂಡ ಅನುಭವ ಆಗುತ್ತದೆ. ಮಕ್ಕಳ ಭವಿಷ್ಯಕ್ಕಾಗಿ ಮನೆಗಳಿಗೆ ಪತ್ರಿಕೆಗಳನ್ನು ತರಿಸಿಕೊಳ್ಳಬೇಕು. ಮಕ್ಕಳಲ್ಲಿ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಬೇಕು. ಇದರಿಂದ ಭಾಷಾ ಜ್ಞಾನ ಹೆಚ್ಚುವುದಲ್ಲದೆ ಮೌಲ್ಯಗಳು ಬೆಳೆಯುತ್ತವೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಸಿದ್ದಪ್ಪ ಮುದಕಣ್ಣವರ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಅಮೋಘ ಖೊಬ್ರಿ, ಡಾ.ರವಿ ಸಂಕ, ಇಒ ರವಿ ಬಂಗಾರೆಪ್ಪನವರ್, ಮುಖಂಡರಾದ ಬಸವರಾಜ ಬುಟಾಳಿ, ವೆಂಕನಗೌಡ ಪಾಟೀಲ, ಶ್ರೀಶೈಲ ಜನಗೌಡ, ಬಿಸಿಎಂ ವಿಸ್ತರಣೆ ಅಧಿಕಾರಿ ಜಿ.ಡಿ. ಗುಂಡ್ಲೂರ, ಕಾರ್ಯಾಧ್ಯಕ್ಷ ಗಿರೀಶ ಬಸರಗಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು