ಬುಧವಾರ, ನವೆಂಬರ್ 25, 2020
20 °C

‘ಕನ್ನಡ ಬೆಳೆಸುವ ಕಾರ್ಯ ನಡೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲಸಂಗ: ‘ಗಡಿ ನಾಡಿನಲ್ಲಿ ಕನ್ನಡ ಭಾಷೆ ಉಳಿಸುವುದು ಮತ್ತು ಅಭಿಮಾನ ಮೂಡಿಸುವುದು ಕೇವಲ ಭಾಷಣಗಳಿಂದ ಸಾಧ್ಯವಾಗದು. ವರ್ಷವಿಡೀ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಗಡಿ ಭಾಗದ ಜನರಿಗೆ ಮೂಲ ಸೌಕರ್ಯ ಒದಗಿಸುವ ಕೆಲಸ ಸರ್ಕಾರದಿಂದ ನಡೆಯಬೇಕು’ ಎಂದು ಗಡಿ ನಾಡು ಕನ್ನಡ ಬಳಗದ ಅಧ್ಯಕ್ಷ ಗುರುರಾಜ ಕುಂಬಾರ ಹೇಳಿದರು.

ಇಲ್ಲಿನ ಸಿದ್ದರಾಮೆಶ್ವರ ಮಠದಲ್ಲಿ ಗಡಿನಾಡು ಕನ್ನಡ ಬಳಗ ಮತ್ತು ಪಂ.ಪುಟ್ಟರಾಜ ಕವಿ ಗವಾಯಿಗಳ ರಂಗ ಸಂಸ್ಥೆ ವತಿಯಿಂದ ಭಾನುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ಬೆಳೆಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು’ ಎಂದರು.

ನಾಟಕಕಾರ ಅಮೋಘ ಖೊಬ್ರಿ ಮಾತನಾಡಿ, ‘ಗಡಿ ಗ್ರಾಮಗಳ ಅಭಿವೃದ್ಧಿ ಬಹಳಷ್ಟು ಕುಂಠಿತಗೊಂಡಿದೆ. ಕನ್ನಡಪರ ಚಟುವಟಿಕೆಗಳು ನಡೆಯುತ್ತಿಲ್ಲ. ಮಹಾರಾಷ್ಟ್ರದ ಜತ್ತ ತಾಲ್ಲೂಕಿನ 42 ಗಡಿ ಗ್ರಾಮಗಳಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದಾರೆ. ಆ ಗ್ರಾಮಗಳಲ್ಲಿ ಕನ್ನಡದ ಅಳಿವು ಉಳಿವು ಅಲ್ಲಿ ಕನ್ನಡಪರ ಚಟುವಟಿಕೆ ಹಮ್ಮಿಕೊಳ್ಳುವುದು ಮತ್ತು ಅಭಿವೃದ್ಧಿ ಮೇಲೆ ನಿಂತಿದೆ. ಸಂಬಂಧಿಸಿದ ಪ್ರಾಧಿಕಾರಗಳು ಇತ್ತ ಹೆಚ್ಚು ಒತ್ತು ಕೊಡಬೇಕು’ ಎಂದು ಒತ್ತಾಯಿಸಿದರು.

ಸಂಘಟಕರಾದ ಡಾ.ಬಿ.ಎಸ್. ಕಾಮನ್, ಬಿ.ಎಚ್. ಶೆಲ್ಲೆಪ್ಪಗೋಳ, ಡಾ.ಎಸ್.ಐ. ಇಂಚಗೇರಿ, ಸಿದ್ದು ಕೋಡ್ನಿ, ಮಹಾದೇವ ಸಕ್ರಿ, ಸುರೇಶ ಸನಗೊಂಡ, ಗಪೂರ ಮುಲ್ಲಾ, ಅಪ್ಪು ಜಮಾದರ, ಇಮ್ತಿಯಾಜ್ ಮುಜಾವರ, ವಿಜಯ ಪತ್ತಾರ, ಜಗದೀಶ ಮಠದ, ಅಮಸಿದ್ದ ಟೋಪಣಗೋಳ, ರಾವಸಾಬ ಮೆಣಸಂಗಿ, ರಾಜು ಕಲಾಲ, ರಾಜು ಸಾಗರ, ಸಂಜು ಮೋರೆ, ಹಣಮಂತ ಥೈಕಾರ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು