ಶನಿವಾರ, ಜನವರಿ 25, 2020
19 °C
ಕೆಪಿಎಸ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಳಗಾವಿ| ವಿವಿಧ ಹುದ್ದೆಗೆ ಜಿಲ್ಲೆಯ 32 ಮಂದಿ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗವು 428 ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಜಿಲ್ಲೆಯ 32 ಮಂದಿ ತೇರ್ಗಡೆ ಹೊಂದಿ, ವಿವಿಧ ಹುದ್ದೆಗಳನ್ನು ಪಡೆದಿದ್ದಾರೆ. ನಾಲ್ವರು ಉಪ ವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.

ವಿವರ ಇಂತಿದೆ.

ಉಪ ವಿಭಾಗಾಧಿಕಾರಿ: ಬೆಳಗಾವಿ ಸದಾಶಿವನಗರದ ದೂರವಾಣಿ ಕಾಲೊನಿಯ ಶ್ರವಣ್ ನಾಯ್ಕ್, ಅಥಣಿ ತಾಲ್ಲೂಕು ಮೋಳೆಯ ಜಗದೀಶ್ ಅಡಹಳ್ಳಿ, ಬೆಳಗಾವಿಯ ಖಾಸ್‌ಬಾಗದ ಗಾಯತ್ರಿ ನಗರದ ಕಲ್ಯಾಣಿ ವೆಂಕಟೇಶ್ ಕಂಬಾಳೆ, ಚಿಕ್ಕೋಡಿಯ ರಾಜೀವ್‌ನಗರ ಹುಡ್ಕೊ ಕಾಲೊನಿಯ ಶ್ವೇತಾ ಮೋಹನ್ ಬೀಡಿಕರ್.

ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್‌ ಪೊಲೀಸ್: ಬೆಳಗಾವಿಯ ರಾಣಿ ಚನ್ನಮ್ಮ ನಗರದ ಗಜಾನನ ವಾಮನ ಸುತಾರ.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ: ಬೆಳಗಾವಿಯ ಹನುಮಾನ್‌ ನಗರ 2ನೇ ಹಂತದ ಗೋಪಾಲ್‌ ರಾಠೋಡ್.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ: ಸವದತ್ತಿ ತಾಲ್ಲೂಕು ಗುರ್ಲಹೊಸೂರು ರಾಮಾಪುರ ಸೈಟ್ ನಿವಾಸಿ ಶಕೀರ್‌ಅಹಮದ್ ಅಕಬರಸಾಬ್‌ ತೊಂಡಿಖಾನಂ, ಅಥಣಿ ತಾಲ್ಲೂಕು ಖವಟಕೊಪ್ಪದ ಪ್ರವೀಣ್‌ ಲಕ್ಕಪ್ಪ ಪಾಟೀಲ, ಬೆಳಗಾವಿ ತಾಲ್ಲೂಕು ಮಾರಿಹಾಳದ ಕುಂಬಾರ ಗಲ್ಲಿಯ ಸಂತೋಷ್ ಕಿರಗಿ, ರಾಯಬಾಗ ತಾಲ್ಲೂಕಿನ ಹಿಡಕಲ್‌ ಗ್ರಾಮದ ಮೋಹನ್‌ಚಂದ್ ಹನಮಂತ ಕಟಗಿ, ರಾಮದುರ್ಗ ತಾಲ್ಲೂಕು ತೋರಣಗಟ್ಟಿಯ ಜ್ಞಾನೇಶ್ವರ ಯಲ್ಲಪ್ಪ ತಿಪ್ಪಣ್ಣವರ.

ತಹಶೀಲ್ದಾರ್‌ ಗ್ರೇಡ್‌–2: ಖಾನಾಪುರ ತಾಲ್ಲೂಕು ಹಿರೇಹಟ್ಟಿಹೊಳಿಯ ಸದಾಶಿವ ಸಂಭಾಜಿ ಮಕ್ಕೋಜಿ, ಬೆಳಗಾವಿಯ ಬಸವನಕುಡಚಿಯ ಅನಿಲ್ ಕಲ್ಲಪ್ಪ ಬಡಿಗೇರ, ಬೈಲಹೊಂಗಲ ತಾಲ್ಲೂಕು ಬೈಲೂರಿನ ಮಹೇಶ್ ಸದೆಪ್ಪ ಪತ್ರಿ, ರಾಯಬಾಗ ತಾಲ್ಲೂಕು ಯಬರಟ್ಟಿಯ ಶಿವಕುಮಾರ್‌ ಬಿರಾದಾರ, ಅಥಣಿ ತಾಲ್ಲೂಕು ಸಿದ್ದೇವಾಡಿಯ ಸುರೇಶ್‌ ಮುಂಜೆ, ಗೋಕಾಕ ತಾಲ್ಲೂಕು ಸತ್ತಿಗೇರಿ ತೋಟದ ಪರಶುರಾಮ ಸತ್ತಿಗೇರಿ, ರಾಯಬಾಗ ತಾಲ್ಲೂಕು ಹಿಡಕಲ್‌ನ ವಿಠ್ಠಲ, ಅಥಣಿ ತಾಲ್ಲೂಕು ಶಿವನೂರದ ಕಲಗೌಡ ಪಾಟೀಲ.

ವಾಣಿಜ್ಯ ತೆರಿಗೆ ಅಧಿಕಾರಿ: ಗೋಕಾಕ ತಾಲ್ಲೂಕು ಕಲ್ಲೋಳಿಯ ವಿನಯದೇವ ಪ್ರಭುದೇವ ಮಠಪತಿ, ಬೆಳಗಾವಿ ಮಾಸ್ತಮರಡಿ ಶಿವಾಜಿಗಲ್ಲಿಯ ಆನಂದ ಅಂಬೋಜಿ, ಗೋಕಾಕ ತಾಲ್ಲೂಕು ನಾಗನೂರದ ಭರತ್‌ ಶ್ರೀಪಾದ ಸಗರೆ, ಅಥಣಿ ತಾಲ್ಲೂಕಿನ ಕಾತ್ರಾಳದ ರಾಜು ಅಣ್ಣಪ್ಪ ಮುದವಿ, ಬೆಳಗಾವಿಯ ಹಿಂದವಾಡಿ 4ನೇ ಕ್ರಾಸ್‌ ಆದರ್ಶನಗರದ ಸ್ಫೂರ್ತಿ ಬಾಲಚಂದ್ರ ದೊಡ್ಡಮನಿ, ಅಥಣಿ ತಾಲ್ಲೂಕು ಕೊಕಟನೂರದ ಭೀಮಸೇನ ಜ್ಯೋತಿಬಾ ಘಾಟಗೆ, ಬೆಳಗಾವಿ ತಾಲ್ಲೂಕು ಮಾರಿಹಾಳದ ಮಹಮದ್‌ಗೌಸ್ ನಬಿಸಾಬ್‌ ಮುಲ್ಲಾ.

ಮುಖ್ಯಾಧಿಕಾರಿ: ಬೆಳಗಾವಿ ಭಾಗ್ಯನಗರ 9ನೇ ಕ್ರಾಸ್‌ನ ಅಮಿತ್ ಅಶೋಕ ತರದಾಳೆ, ವಡಗಾವಿ ಯಳ್ಳೂರು ರಸ್ತೆಯ ಭಾಗ್ಯಶ್ರೀ ರಾಮಚಂದ್ರ ಹುಗ್ಗಿ, ಚಿಕ್ಕೋಡಿ ತಾಲ್ಲೂಕು ಬೋರಗಾಂವವಾಡಿಯ ವಿಶ್ವೇಶ್ವರ ಬದರಗಡೆ, ಗೋಕಾಕ ವಿವೇಕಾನಂದ ನಗರದ ವೆಂಕಟೇಶ ಮಾರುತಿ ನಾಗನೂರ.

ಸಹಕಾರ ಸಂಘಗಳ ಸಹಾಯಕ ರಿಜಿಸ್ಟ್ರಾರ್‌: ಅಥಣಿ ತಾಲ್ಲೂಕು ಜುಗುಳದ ರವೀಂದ್ರ ಪರಸಗೌಡ ಪಾಟೀಲ, ಅಥಣಿ ತಾಲ್ಲೂಕು ಅಜಿತ್‌ ಅಣ್ಣಪ್ಪ ಶಿರಹಟ್ಟಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು