ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ಕುಟುಂಬದವರಿಂದ ಭಿಕ್ಷಾಟನೆ

Last Updated 13 ಏಪ್ರಿಲ್ 2021, 15:34 IST
ಅಕ್ಷರ ಗಾತ್ರ

ಬೆಳಗಾವಿ: ಸಾರಿಗೆ ಸಂಸ್ಥೆ ನೌಕರರ ಮುಷ್ಕರ ಮಂಗಳವಾರ 7ನೇ ದಿನಕ್ಕೆ ಮುಂದುವರಿದಿದೆ.

ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಬಳಿ ಸಾರಿಗೆ ನೌಕರರ ಕುಟುಂಬದವರು ಭಿಕ್ಷೆ ಬೇಡಿ ಪ್ರತಿಭಟಿಸಿದರು. ಪೊಲೀಸರು ಅವರನ್ನು ಅಲ್ಲಿಂದ ಕಳುಹಿಸಲು ಹರಸಾಹಸ ನಡೆಸಿದರು.

ಈ ನಡುವೆ ಕೆಲವು ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರಾಗಿದ್ದು, ಬಸ್ ಸಂಚಾರ ಸೇವೆಯೂ ಆರಂಭವಾಗಿದೆ.

ಸುಕನ್ಯಾ ಎನ್ನುವವರು ಮಾತನಾಡಿ, ‘ನಮಗೆ ಮಾಧ್ಯಮದವರು ಸೇರಿ ಯಾರಿಂದಲೂ ಸಹಾಯ, ಸಹಕಾರ ಸಿಗುತ್ತಿಲ್ಲ. ನಮ್ಮ ಮುಂದಿನ ಭವಿಷ್ಯವೇನು ಎನ್ನುವುದೂ ಗೊತ್ತಾಗುತ್ತಿಲ್ಲ. ನ್ಯಾಯದ ದಾರಿಯಲ್ಲಿ ವೇತನ ಹೆಚ್ಚಳ ಕೇಳಿದರೆ ಸರ್ಕಾರ ಹಟಮಾರಿ ಧೋರಣೆ ತಳೆದಿದೆ. ಕಳೆದ ತಿಂಗಳು ಅರ್ಧ ಸಂಬಳ ಹಾಕಿದ್ದಾರೆ. ಇದರಿಂದ ಹಬ್ಬ ಆಚರಿಸುವುದಿರಲಿ, ಜೀವನ ಸಾಗಿಸುವುದೆ ಕಷ್ಟವಾಗುತ್ತಿದೆ. ಭಿಕ್ಷಾಟನೆಗೂ, ಪ್ರತಿಭಟನೆಗೂ ಅನುಮತಿ ಪಡೆಯಬೇಕು ಎನ್ನುತ್ತಿದ್ದಾರೆ. ನ್ಯಾಯಯುತ ಬೇಡಿಕೆ ಈಡೇರಿಸಿ ನಮ್ಮನ್ನು ಉಳಿಸಿರಿ’ ಎಂದು ಕೋರಿದರು.

ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕರೊಬ್ಬರನ್ನು ಕುಟುಂಬದವರು ತಡೆದು ತರಾಟೆಗೆ ತೆಗೆದುಕೊಂಡರು. ಕಾರ್ಯ ನಿರ್ವಹಿಸಲು ಬಂದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರಲ್ಲಿ ಕೆಲವರ ಮೇಲೆ ಪೊಲೀಸರು ಥಳಿಸಿದ ಘಟನೆಯೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT