ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿಗುಂದ: 25ರಂದು ‘ಕುಡಚಿ ಹ್ಯಾಸ್‌ ಟ್ಯಾಲೆಂಟ್’ ಸ್ಪರ್ಧೆ

Published 20 ಸೆಪ್ಟೆಂಬರ್ 2023, 6:55 IST
Last Updated 20 ಸೆಪ್ಟೆಂಬರ್ 2023, 6:55 IST
ಅಕ್ಷರ ಗಾತ್ರ

ಹಂದಿಗುಂದ: ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಹಾರೂಗೇರಿಯ ಕಾಳಿಕಾ ಸಭಾಭವನದಲ್ಲಿ ಸೆ. 25ರಂದು ಬೆಳಿಗ್ಗೆ 10 ಗಂಟೆಗೆ ‘ಕುಡಚಿ ಹ್ಯಾಸ್‌ ಟ್ಯಾಲೆಂಟ್’ ಎಂಬ ಪ್ರತಿಭಾನ್ವೇಷಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಲಾವಿದರು 5 ನಿಮಿಷದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ವಯಸ್ಸಿನ ಮಿತಿ ಇಲ್ಲ. ಗುಂಪು ನೃತ್ಯ, ಕಲೆ, ಜಾದೂ, ಸ್ಟಂಟ್, ಸೋಲೋ ನೃತ್ಯ, ಮಲ್ಲಕಂಬ, ವಾದ್ಯಗಳ ಮೇಳ, ಸಾಹಸ ಯಾವುದೇ ಕಲೆಯನ್ನು ಪ್ರದರ್ಶಿಸಬಹುದು. ವಿಜೇತರಿಗೆ ₹21 ಸಾವಿರ, ₹ 15 ಸಾವಿರ, ₹10 ಸಾವಿರ ಹೀಗೆ ನಗದು ಬಹುಮಾನವಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಕೊಡಲಾಗುವುದು.

ಅಕ್ಟೋಬರ್ 7ರಂದು ಸಂಜೆ 5 ಗಂಟೆಗೆ ಚಿಕ್ಕೋಡಿ ಪಟ್ಟಣದ ಆರ್‌.ಡಿ ಹೈಸ್ಕೂಲ್ ಮೈದಾನದಲ್ಲಿ ‘ಗ್ರ್ಯಾಂಡ್‌ ಫಿನಾಲೆ’ ಜರಗಲಿದೆ. ಜಿಲ್ಲೆಯ ಕಲಾವಿದರು ಇದರ ಸದುಪಯೋಗ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 7625053280, 9686500566, 8861786944 ಸಂಖ್ಯೆ ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT