ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ. 22ರಂದು ಕುರುಹಿನಶೆಟ್ಟಿ ಸೊಸೈಟಿ ‘ಬೆಳ್ಳಿ ಸಂಭ್ರಮ’

Published 14 ಜನವರಿ 2024, 15:23 IST
Last Updated 14 ಜನವರಿ 2024, 15:23 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿಯ ಕುರುಹಿನಶೆಟ್ಟಿ ಅರ್ಬನ್‌ ಕೋ.ಆಪ್‌ ಕ್ರೆಡಿಟ್‌ ಸೊಸೈಟಿಯ ಬೆಳ್ಳಿ ಸಂಭ್ರಮ ಜ. 22ರಂದು ಮಧ್ಯಾಹ್ನ 4ಕ್ಕೆ ಎಸ್‌ಎಸ್‌ಆರ್‌ ಕಾಲೇಜು ಮೈದಾನದಲ್ಲಿ  ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಬಸವಣ್ಣಿ ಚಿ. ಮುಗಳಖೋಡ ತಿಳಿಸಿದರು.

ಕುರುಹಿನಶೆಟ್ಟಿ ಸೊಸೈಟಿ ಸಭಾಭವನದಲ್ಲಿ ಭಾನುವಾರ ಬೆಳ್ಳಿ ಸಂಭ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೂಡಲಗಿಯ ಶಿವಬೋಧರಂಗ ಮಠದ ದತ್ತಾತ್ರೇಯಬೋಧ ಸ್ವಾಮೀಜಿ, ಹಳೇಹುಬ್ಬಳ್ಳಿಯ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಸದಲಗಾದ ಶ್ರದ್ಧಾನಂದ ಸ್ವಾಮೀಜಿ ಹಾಗೂ ಅಸುಂಡಿಯ ಶಿವಶರಣೆ ನೀಲಮ್ಮಾ ತಾಯಿ ಸಾನ್ನಿಧ್ಯ ವಹಿಸುವರು ಎಂದರು.

ಹಿರಿಯ ನಿರ್ದೇಶಕ ಸುಭಾಷ ಬೆಳಕೂಡ ಮಾತನಾಡಿ, ಸೊಸೈಟಿಯ ಅಧ್ಯಕ್ಷ ಬಸವಣ್ಣಿ ಮುಗಳಖೋಡ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸುವರು. ‘ಕುರುಹುಪಥ’ ಬೆಳ್ಳಿಹಬ್ಬದ ಸ್ಮರಣ ಸಂಚಿಕೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಡುಗಡೆ ಮಾಡುವರು. ಮುಖ್ಯ ಅತಿಥಿಗಳಾಗಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಎ.ಬಿ. ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ಕಲ್ಲೊಳಿಯ ಬಸವೇಶ್ವರ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಬಾಳಪ್ಪ ಬಿ. ಬೆಳಕೂಡ ಮತ್ತು ಸಹಕಾರ ಸಂಘಗಳ ಇಲಾಖೆಯ ಅಧಿಕಾರಿಗಳು, ಸಹಕಾರಿ ಚಿಂತಕರು, ಸಾಹಿತಿಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಹಿರಿಯ ನಿರ್ದೇಶಕ ಗೊಡಚಪ್ಪ ಮುರಗೋಡ ಮತ್ತು ಪ್ರಧಾನ ಕಾರ್ಯದರ್ಶಿ ರಮೇಶ ವಂಟಗೂಡಿ ಮಾತನಾಡಿ ಬೆಳಿಗ್ಗೆ ಸೊಸೈಟಿಯಲ್ಲಿ ಪೂಜೆ, ಬೆಳಿಗ್ಗೆ 11ರಿಂದ ಜಾನಪದ ತಂಡದಿಂದ ಗಾಯನ, ಮಧ್ಯಾಹ್ನ 2ರಿಂದ ಸೊಸೈಟಿ ಕಟ್ಟಡದಿಂದ ಎಸ್‌ಎಸ್‌ಆರ್ ಕಾಲೇಜು ಮೈದಾನದವರೆಗೆ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ಸಂಜೆ 7.30ಕ್ಕೆ ನಿರೂಪಕಿ ಅನುಶ್ರೀ ಹಾಗೂ ಶಮಿತಾ ಮಲ್ನಾಡ ತಂಡದವರಿಂದ ಬೆಂಗಳೂರಿನ ಮೇಘಾ ಸಂಗೀತ ಸಂಜೆ ಕಾರ್ಯಕ್ರಮ ಇರುವುದು ಎಂದು ತಿಳಿಸಿದರು.

ಸೊಸೈಟಿ ಉಪಾಧ್ಯಕ್ಷ ಲಕ್ಕಪ್ಪ ಪೂಜೇರಿ, ನಿರ್ದೇಶಕರಾದ ಇಸ್ಮಾಯಿಲ್ ಕಳ್ಳಿಮನಿ, ಬಸವರಾಜ ಬೆಳಕೂಡ, ವಿಶಾಲ ಶೀಲವಂತ, ಉಮಾ ಬೆಳಕೂಡ, ಶಾಂತವ್ವ ಬೋರಗಲ್, ಮಹಾಬೂಬಿ ಕಳ್ಳಿಮನಿ, ಮಾಲಾ ಬೆಳಕೂಡ, ಶ್ಯಾಲನ್ ಕೊಡತೆ, ಬಿ.ವೈ. ಶಿವಾಪುರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT