ಗುರುವಾರ , ಡಿಸೆಂಬರ್ 3, 2020
18 °C
ರಸ್ತೆ, ಚರಂಡಿ ನಿರ್ಮಿಸಲು ಸ್ಥಳೀಯರ ಆಗ್ರಹ

ಮೂಲಸೌಲಭ್ಯಗಳಿಲ್ಲದೆ ಬಳಲುತ್ತಿರುವ ಬೆಳಗಾವಿಯ ದೇವರಾಜ ಅರಸು ಬಡಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 58ನೇ ವಾರ್ಡ್‌ನ ದೇವರಾಜ ಅರಸು ಬಡಾವಣೆ (1991ರ ಸ್ಕೀಂ ಯೋಜನೆ 11/ಬಿ) ಕನಿಷ್ಠ ಮೂಲ ಸೌಲಭ್ಯಗಳಿಲ್ಲದೆ ಬಳಲುತ್ತಿದ್ದು, ನಿವಾಸಿಗಳು ತೊಂದರೆಗೆ ಸಿಲುಕಿದ್ದಾರೆ.

‘ಇಲ್ಲಿ 29 ವರ್ಷಗಳಿಂದ ಹಲವು ಮನೆಗಳು ನಿರ್ಮಾಣಗೊಂಡಿದ್ದರೂ ಅಗತ್ಯವಾದ ರಸ್ತೆ, ಚರಂಡಿ ಮೊದಲಾದ ಸೌಕರ್ಯಗಳನ್ನು ಕಲ್ಪಿಸಲಾಗಿಲ್ಲ. ಬುಡಾದಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ, ಯಾವುದೇ ಅಭಿವೃದ್ಧಿಯನ್ನೂ ಮಾಡದೆ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿದೆ. ಇದರಿಂದ ನಾವು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ’ ಎಂದು ನಿವಾಸಿಗಳಾದ ಎಂ.ಐ. ಬೋರಣ್ಣವರ, ವಿ.ಬಿ. ಸಣಪೂಜಿ, ಎ.ಎಸ್. ಬಾಗೇವಾಡಿ, ಆರೀಫ್ ಎಚ್. ಬಿರಾದಾರ, ರಾಜಲಕ್ಷ್ಮಿ ಸದಾಶಿವ ಕಿತ್ತೂರ, ಮೀನಾಕ್ಷಿ ತೊಗರಿ, ವಿರೂಪಾಕ್ಷಿ ಯರಗಂಬಳಿಮಠ, ಚಂದ್ರಕಾಂತ ಕುಲಕರ್ಣಿ, ಡಾ.ಮಹೇಶ ಗುರನಗೌಡರ, ಶಾಂತಕುಮಾರ ಅತೋಡೆ, ಪ್ರಭು ಚಂದ್ರರಗಿರಿಮಠ ಮೊದಲಾದವರು ದೂರಿದ್ದಾರೆ.

‘ಇಲ್ಲಿಂದ ಆಯ್ಕೆಯಾದ ನಗರಪಾಲಿಕೆ ಸದಸ್ಯರು ಬಡಾವಣೆಯ ಪ್ರಗತಿಗೆ ಮುಂದಾಗಲಿಲ್ಲ. ಈ ಭಾಗದ ಶಾಸಕರು ಕಣ್ಣೆತ್ತಿಯೂ ನೋಡಲಿಲ್ಲ; ಸ್ಪಂದಿಸಲಿಲ್ಲ.  ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಮುಂದುವರಿದಿದೆ. ಪ್ರತಿ ವರ್ಷ ನಾಗರಿಕರು ಸಾವಿರಾರು ರೂಪಾಯಿ ಮನೆ ತೆರಿಗೆಯನ್ನು, ಅಭಿವೃದ್ಧಿ ಶುಲ್ಕಗಳನ್ನು ಪಾವತಿಸಿದ್ದರೂ, ನೂರೆಂಟು ಸಲ ಮನವಿ ಮಾಡಿ ಬೇಡಿಕೊಂಡಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದ್ದಾರೆ.

‘ಇತ್ತ ಹಿರಿಯ ಅಧಿಕಾರಿಗಳು ಗಮನಹರಿಸಬೇಕು. ಕೂಡಲೇ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿಕೊಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು