ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಡಿಡಿಪಿಐ ಆಗಿ ಲೀಲಾವತಿ ಹಿರೇಮಠ ನಿಯೋಜನೆ

Published : 28 ಆಗಸ್ಟ್ 2024, 15:43 IST
Last Updated : 28 ಆಗಸ್ಟ್ 2024, 15:43 IST
ಫಾಲೋ ಮಾಡಿ
Comments

ಬೆಳಗಾವಿ: ಬೆಳಗಾವಿಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕಿ (ಡಿಡಿಪಿಐ) ಆಗಿ ಲೀಲಾವತಿ ಹಿರೇಮಠ ಅವರನ್ನು ನಿಯೋಜನೆಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಪ್ರಸ್ತುತ ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು, ಈ ಹಿಂದೆ ಬೆಳಗಾವಿಯ ಡಯಟ್‌ನಲ್ಲಿ ಹಿರಿಯ ಉಪನ್ಯಾಸಕಿ, ಡಿಡಿಪಿಐ ಕಚೇರಿಯಲ್ಲಿ ಶಿಕ್ಷಣಾಧಿಕಾರಿ ಮತ್ತು ಅಕ್ಷರ ದಾಸೋಹ ವಿಭಾಗದಲ್ಲಿ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಅಕ್ಟೋಬರ್‌ನಿಂದ ಖಾಲಿ ಇತ್ತು

ಒಂದು ವರ್ಷದ ಹಿಂದೆ ‘ಡಿಡಿಪಿಐ’ ಕುರ್ಚಿಗಾಗಿ ಅಧಿಕಾರಿಗಳ ಮಧ್ಯೆ ಗುದ್ದಾಟ ನಡೆದಿತ್ತು. 2023ರ ಅಕ್ಟೋಬರ್‌ 20ರಂದು ಬಸವರಾಜ ನಾಲತವಾಡ ಅವರಿಂದ ತೆರವಾದ ಸ್ಥಾನ ಖಾಲಿ ಇತ್ತು. ಡಯಟ್‌ ಪ್ರಾಚಾರ್ಯರಾಗಿದ್ದ ಎಸ್‌.ಡಿ.ಗಾಂಜಿ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರಾಗಿದ್ದ ಬಿ.ಎಸ್‌.ಮಾಯಾಚಾರಿ ಮತ್ತು ಚಿಕ್ಕೋಡಿ ಡಿಡಿಪಿಐ ಆಗಿದ್ದ ಮೋಹನಕುಮಾರ್‌ ಹಂಚಾಟೆ ಅವರು, ಬೆಳಗಾವಿ ಪ್ರಭಾರ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಪೂರ್ಣಕಾಲಿಕ ಡಿಡಿಪಿಐ ಇಲ್ಲದ್ದರಿಂದ ಶೈಕ್ಷಣಿಕ ಸಾಧನೆಗೆ ಹಿನ್ನಡೆಯಾಗುತ್ತಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. 10 ತಿಂಗಳ ನಂತರ ಎಚ್ಚೆತ್ತ ಸರ್ಕಾರ, ಈ ಹುದ್ದೆಗೆ ಪೂರ್ಣಕಾಲಿಕ ಅಧಿಕಾರಿ ನೇಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT