ಶನಿವಾರ, ಜನವರಿ 25, 2020
22 °C

ಲೋಕ ಅದಾಲತ್‌: 7,204 ಪ್ರಕರಣ ಇತ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಶನಿವಾರ ಜಿಲ್ಲೆಯಾದ್ಯಂತ ನಡೆಸಿದ ಲೋಕ ಅದಾಲತ್‌ನಲ್ಲಿ ವಿವಿಧ 7,204 ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ₹ 21.32 ಕೋಟಿ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.

ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲೂ ಪ್ರಕ್ರಿಯೆ ನಡೆದಿದೆ. ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್‌ ನ್ಯಾಯಾಧೀಶ ಆರ್‌.ಜೆ. ಸತೀಶ್‌ಸಿಂಗ್‌ ಸೇರಿದಂತೆ 69 ನ್ಯಾಯಾಧೀಶರು, ವಕೀಲರು ಮತ್ತು ಸಿಬ್ಬಂದಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. 26,859 ಪ್ರಕರಣಗಳನ್ನು ನಿಗದಿಪಡಿಸಲಾಗಿತ್ತು.

ಅದಾಲತ್‌ನ ವಿವರ

ವ್ಯಾಜ್ಯಗಳು;  ಸಂಖ್ಯೆ;  ಇತ್ಯರ್ಥವಾದವು;  ಪರಿಹಾರ

ಬ್ಯಾಂಕಿಂಗ್;   550;  397;  ₹ 3.17 ಕೋಟಿ

ಕ್ರಿಮಿನಲ್ ಕಂಪೌಂಡೇಬಲ್ ಅಫೆನ್ಸ್;  2000;  522;  ₹ 66 ಲಕ್ಷ

ವಿದ್ಯುತ್‌ ಬಿಲ್‌; 522;  522; ₹ 44 ಲಕ್ಷ

ಕಾರ್ಮಿಕ ವ್ಯಾಜ್ಯ; 1;  1;  ₹1.60 ಲಕ್ಷ

ವಾಹನ ಅಪಘಾತ; 1,700; 111; ₹.3.8 ಕೋಟಿ

ವೈವಾಹಿಕ ವ್ಯಾಜ್ಯ;700;  60;....

ಎನ್‌.ಐ. ಕಾಯ್ದೆ;3500;  689;  ₹ 10.60 ಕೋಟಿ

ಇತರ ಸಿವಿಲ್ ಪ್ರಕರಣ;12,009;  659;  ₹ 3.77 ಕೋಟಿ

ಇತರೆ;  5,100;  4,242;  ₹ 26 ಲಕ್ಷ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು