ಗರ್ಭಗುಡಿ ನಿಂಗರಾಜ್ ( 21) ಸಾವನ್ನಪ್ಪಿದ ವ್ಯಕ್ತಿ. ಲಾರಿಯಲ್ಲಿದ್ದ ಹನುಮಂತ, ಪ್ರತಾಪ್ , ಅಂಜಿನಪ್ಪ ಅವರು ಗಾಯಗೊಂಡಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಲಾರಿ ಚಾಲಕ ಮಂಜುನಾಥ್ ಅತೀವೇಗವಾಗಿ ಚಲಾಯಿಸಿದ್ದರಿಂದ ಬೈರಾಪುರ ಕ್ರಾಸ್ ಸಮೀಪ ಲಾರಿ ಪಲ್ಟಿಯಾಗಿದೆ ಎನ್ನಲಾಗಿದೆ. ಹರಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.