ಮಂಗಳವಾರ, ಜೂನ್ 22, 2021
22 °C

ಬೆಳಗಾವಿ: ಐಎಎಸ್‌ ಅಧಿಕಾರಿ ಎಂ.ಜಿ. ಹಿರೇಮಠ ವಾಪಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಐಎಎಸ್‌ ಅಧಿಕಾರಿ ಎಂ.ಜಿ. ಹಿರೇಮಠ ಅವರನ್ನು ಇಲ್ಲಿನ ಜಿಲ್ಲಾಧಿಕಾರಿ ಹುದ್ದೆಗೆ ಮತ್ತೆ ವರ್ಗಾಯಿಸಲಾಗಿದೆ.

ಇದೇ ಜಿಲ್ಲೆಯವರಾಗಿದ್ದ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವರ್ಗಾಯಿಸಲಾಗಿತ್ತು. ಆ ಸ್ಥಾನದಲ್ಲಿ ಡಾ.ಕೆ. ಹರೀಶ್‌ಕುಮಾರ್ ಅವರು ಈವರೆಗೆ ಕಾರ್ಯನಿರ್ವಹಿಸಿದ್ದರು. ಚುನಾವಣೆ ಮುಗಿದ ಕಾರಣ ಹಿರೇಮಠ ಅವರನ್ನು ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ. ಹರೀಶ್‌ಕುಮಾರ್‌ ಅವರಿಗೆ ಉದ್ಯೋಗ ಮತ್ತು ತರಬೇತಿ ಆಯುಕ್ತರ ಹುದ್ದೆಗೆ (ಬೆಂಗಳೂರು) ವರ್ಗಾಯಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು