ಬೆಳಗಾವಿ: ಜಿಲ್ಲೆಯ ಚೋರ್ಲಾ ಘಾಟ್ನಲ್ಲಿ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಹಾಗೂ ಇದನ್ನು ಬಹಿರಂಗ ಮಾಡಿದ ಸಂದೀಪ ಪಾಟೀಲ ಅಪಹರಣ ಪ್ರಕರಣದ ಮುಖ್ಯ ಆರೋಪಿ ಕಿಶೋರ್ ಶನಿವಾರ ರಾತ್ರಿ ನಾಸಿಕ್ ತಾಲ್ಲೂಕಿನ ಘೋಟಿ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ.

ಭಾನುವಾರ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿದೆ.

‘ಚೋರ್ಲಾ ಘಾಟ್ನಲ್ಲಿ ₹400 ಕೋಟಿ ಹಣವಿದ್ದ ಎರಡು ಕಂಟೇನರ್ ದರೋಡೆ ಮಾಡಲಾಗಿದೆ. ಇದನ್ನು ನಾನೇ ಮಾಡಿಸಿದ್ದೇನೆ ಎಂದು ಹಣದ ಮಾಲೀಕ ಕಿಶೋರ್ ಸಾಳವೆ ಹಾಗೂ ತಂಡದವರು ನನ್ನನ್ನು ಅಪಹರಣ ಮಾಡಿದ್ದರು’ ಎಂದು ಸಂದೀಪ ಪಾಟೀಲ ದೂರು ದಾಖಲಿಸಿದ್ದರು. ಇದೂವರೆಗೆ ಹಣ ದರೋಡೆ ಅಥವಾ ವಾಹನ ದರೋಡೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

‘ಅಪಹರಣ ಮಾಡಿದ್ದರು ಎನ್ನಲಾದ ವಾಹನ ಚಾಲಕನೂ ಸೇರಿ ಏಳು ಮಂದಿಯನ್ನು ಇದೂವರೆಗೆ ಬಂಧಿಸಲಾಗಿತ್ತು. ಕಿಶೋರ್ ತಲೆಮರೆಸಿಕೊಂಡಿದ್ದರು. ನಾಸಿಕ್ ತಾಲ್ಲೂಕಿನ ಘೋಟಿ ಠಾಣೆಗೆ ಶರಣಾಗಿದ್ದಾರೆ. ಸದ್ಯ ಅಪಹರಣ ಪ್ರಕರಣದಲ್ಲಿಯೇ ಅವರನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
.₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.