ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ | ಉತ್ತಮ ಫಸಲು, ಮಾರಾಟದ್ದೇ ಚಿಂತೆ

ಖಾನಾಪುರ ತಾಲ್ಲೂಕಿನ ತರಕಾರಿ, ಪುಷ್ಪ ಕೃಷಿಕರಿಗೆ ಸಂಕಷ್ಟ
Last Updated 24 ಏಪ್ರಿಲ್ 2020, 20:37 IST
ಅಕ್ಷರ ಗಾತ್ರ

ಖಾನಾಪುರ (ಬೆಳಗಾವಿ): ಹೂವು ಮತ್ತು ತರಕಾರಿ ಉತ್ತಮ ಫಸಲು ಬಂದಿದ್ದರೂ, ತಾಲ್ಲೂಕಿನ 50ಕ್ಕೂ ಹೆಚ್ಚಿನ ಗ್ರಾಮಗಳ ರೈತರು ಮಾರಲಾಗದ ಸ್ಥಿತಿಯಲ್ಲಿದ್ದಾರೆ. ಹತಾಶರಾಗಿರುವ ಕೆಲವು ರೈತರು, ಮೇಯಲುಜಾನುವಾರುಗಳನ್ನು ಬಿಟ್ಟಿದ್ದಾರೆ.

ಡೊಣ್ಣ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಹಾಗಲಕಾಯಿ, ಸೌತೆಕಾಯಿ, ಟೊಮೆಟೊ, ಎಲೆಕೋಸು, ಹೂ ಕೋಸು, ಬೀನ್ಸ್ ಮತ್ತಿತರ ತರಕಾರಿ ಹಾಗೂ ಸೇವಂತಿ, ಗುಲಾಬಿ, ಜರ್ಬೇರಾ ಹೂವುಗಳು, ಸಪೋಟ, ಗೋಡಂಬಿ, ಮಾವು, ಬಾಳೆ ಮತ್ತಿತರ ಹಣ್ಣುಗಳ ಉತ್ತಮ ಫಸಲೂ ಇದೆ. ಆದರೆ ಯಾವುದಕ್ಕೂ ಖರೀದಿದಾರರಿಲ್ಲ.

ಮದುವೆ ಸೀಜನ್‌ನಲ್ಲಿ ತರಕಾರಿ ಮತ್ತು ಹೂವುಗಳಿಗೆ ಬಂಪರ್‌ ಬೆಲೆ ಸಿಗುವ ನಿರೀಕ್ಷೆ ಇತ್ತು. ಈಗ ಹುಸಿಯಾಗಿದೆ. ಪ್ರತಿ ವರ್ಷದಂತೆ ಮುಂಬಯಿ, ಪುಣೆ, ಹೈದರಾಬಾದ್ ಮತ್ತಿತರ ಮಹಾನಗರಗಳಿಗೆ ಸಾಗಿಸುವುದೂ ಕಷ್ಟವಾಗಿದೆ ಎನ್ನುತ್ತಾರೆ ರೈತರು.

ಸ್ಥಳೀಯವಾಗಿ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ಹಾಕಿರುವ ಬಂಡವಾಳವೂ ಬಾರದ ಸ್ಥಿತಿ ಇದೆ.‘ರೈತರ ನೆರವಿಗೆ ಜಿಲ್ಲಾಧಿಕಾರಿ, ತೋಟಗಾರಿಕೆ ಅಧಿಕಾರಿಗಳು ನೆರವಿಗೆ ಧಾವಿಸಬೇಕು‘ ಎಂದುಪಾರಿಶ್ವಾಡ ಗ್ರಾಮದ ರೈತಅಶೋಕ ಅಂಗಡಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT