‘ವರ್ಷವಿಡೀ ಈ ನಡೆ ಅನುಸರಿಸಿ’
‘ರಂಜಾನ್ ಮಾಸದ ಪ್ರಯುಕ್ತ ತಿಂಗಳಿಡೀ ಅಲ್ಲಾಹು ದೇವರನ್ನು ಸ್ಮರಿಸಿದ ಮುಸ್ಲಿಮರು ಈಗ ಹಬ್ಬದ ತಯಾರಿ ನಡೆಸಿದ್ದಾರೆ. ನಿತ್ಯ ಐದು ಹೊತ್ತು ನಮಾಜ್ ಮಾಡಿ ಕುರ್‌ಆನ್ ಪಠಿಸಿ ಆತ್ಮಶುದ್ಧಿ ಮಾಡಿಕೊಂಡಿದ್ದಾರೆ. ಸತ್ಯದ ಹಾದಿಯಲ್ಲಿ ಸಾಗುವ ಸಂಕಲ್ಪ ತೊಟ್ಟಿದ್ದಾರೆ. ಈ ಜೀವನಶೈಲಿ ಒಂದೇ ತಿಂಗಳಿಗೆ ಸೀಮಿತವಾಗಬಾರದು. ವರ್ಷವಿಡೀ ಈ ನಡೆ ಅನುಸರಿಸಬೇಕು. ಸಮಾಜದಲ್ಲಿ ಎಲ್ಲರೊಂದಿಗೆ ಸಹಬಾಳ್ವೆಯಿಂದ ಬಾಳಿ ಪ್ರತಿಯೊಬ್ಬರಿಗೆ ಪ್ರೀತಿ ಹಂಚಬೇಕು’ ಎಂದು ಬೆಳಗಾವಿಯ ಪೊಲೀಸ್ ಕೇಂದ್ರಸ್ಥಾನದ ಮಸೀದಿಯ ಖಾರಿ ಝಾಕೀರ್ ಹುಸೇನ್ ಆರೀಫ್ ಖಾನ್ 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.