ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೊರೊನಾ ಸೈನಿಕ’ರಿಗೆ ಮಾಸ್ಕ್‌, ಸ್ಯಾನಿಟೈಸರ್ ವಿತರಣೆ

Last Updated 16 ಏಪ್ರಿಲ್ 2020, 13:14 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್-19 ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ತುರ್ತು ಸಂದರ್ಭದಲ್ಲಿ ಅಗತ್ಯ ನೆರವು ನೀಡಲು ಸಜ್ಜಾಗಿರುವ ‘ಕೊರೊನಾ ಸೈನಿಕ’ರಿಗೆ (ಸ್ವಯಂ ಸೇವಕರು) ಗುರುವಾರ ಇಲ್ಲಿನ ವಾರ್ತಾಭವನದಲ್ಲಿ ಟಿ-ಶರ್ಟ್, ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಯಿತು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ಕಾರ್ಯದರ್ಶಿ ಡಾ.ಡಿ.ಎನ್. ಮಿಸಾಳೆ ಮಾತನಾಡಿ, ‘ತಾವು ವಾಸಿಸುವ ಪ್ರದೇಶದಲ್ಲಿ ಕೊರೊನಾ ನಿಯಂತ್ರಣ ಕುರಿತು ಅರಿವು ಮೂಡಿಸಬೇಕು. ಆಹಾರ, ಔಷಧಿ ಸಾಮಗ್ರಿಗಳು ಅಥವಾ ತುರ್ತು ವೈದ್ಯಕೀಯ ಸೌಲಭ್ಯಗಳ ಸಮಸ್ಯೆ ಕಂಡುಬಂದರೆ ಅಗತ್ಯ ನೆರವು ನೀಡಬೇಕು. ಅಧಿಕಾರಿಗಳ ಗಮನಕ್ಕೆ ತರಬೇಕು’ ಎಂದು ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಭಾರ ಉಪನಿರ್ದೇಶಕ ಗುರುನಾಥ ಕಡಬೂರ, ‘ಕೊರೊನಾ ಸೈನಿಕರು ಪ್ರಮುಖವಾಗಿ ನಿರ್ಗತಿಕರು, ವಲಸೆ ಕಾರ್ಮಿಕರು ಹಾಗೂ ಅವಶ್ಯ ಇರುವವರಿಗೆ ಆಹಾರ ಮತ್ತು ಔಷಧಿಗಳನ್ನು ತಲುಪಿಸಲು ಮುಂದಾಗಬೇಕು’ ಎಂದರು.

ರೆಡ್‌ಕ್ರಾಸ್ ಸಂಸ್ಥೆಯ ಬೆಳಗಾವಿ ಜಿಲ್ಲಾ ಶಾಖೆ ಅಧ್ಯಕ್ಷ ಅಶೋಕ ಬದಾಮಿ, ಕರೊನಾ ಸೈನಿಕರ ಕಾರ್ಯಚಟುವಟಿಕೆಗಳ ನೇತೃತ್ವ ವಹಿಸಿರುವ ಡಾ.ಶಿವಾನಂದ ಡುಮ್ಮಗೋಳ, ಬಸವರಾಜ ಕೊಳುಚೆ, ಎಲ್‌.ವಿ. ಶ್ರೀನಿವಾಸ, ಪ್ರೊ.ಅವಧೂತ ಮಾನಗೆ, ಸ್ವಯಂ ಸೇವಕರಾದ ವಿನಾಯಕ ನ್ಯಾಮಗೌಡರ, ಮಂಜುನಾಥ ಕಲ್ಲನವರ, ಪ್ರವೀಣ ಹಿರೇಮಠ, ರಂಜಿತ್ ಜೈನ್, ಕೋಮಲಾ ಕೊಳ್ಳಿಮಠ, ಸಂಪತ ದೇಸಾಯಿ, ಚೇತನ ದಿಗಲ್, ಆಶಿಷ್ ಭಾವಿಕಟ್ಟಿ, ಮಂಜುನಾಥ ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT