ಬೆಳಗಾವಿ: ನಗರ ಪೊಲೀಸರು ಪ್ರತ್ಯೇಕ ಪ್ರಕರಣದಲ್ಲಿ, ಇಸ್ಪೀಟ್ ಹಾಗೂ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 13 ಮಂದಿಯನ್ನು ಬಂಧಿಸಿದ್ದಾರೆ.

ವಡಗಾವಿಯ ಮಟ್ಕಾ ಅಡ್ಡೆ ಮೇಲೆ ಶಹಾಪೂರ ಠಾಣೆ ಪೊಲೀಸರು ದಾಳಿ ನಡೆಸಿ ಬಾಬು ಜಾಧವ, ವಿನಾಯಕ ಬಿರ್ಜೆ ಹಾಗೂ ಅಬ್ಜಲ್ ಶೇಠ್ ಎನ್ನುವವರನ್ನು ಬಂಧಿಸಿದ್ದಾರೆ. ಅವರಿಂದ ₹ 17ಸಾವಿರ ವಶಪಡಿಸಿಕೊಂಡಿದ್ದಾರೆ.

ಮಂಡೋಳ್ಳಿ ರಸ್ತೆಯ ಶಾಂತಿ ನಗರ ಗಣಪತಿ ಮಂದಿರದ ಬಳಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ಮೂವರನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಂಥೋನಿ ಮೆಂಡೋನ್ಸ, ಸಂತೋಷ ರಾಠೋಡ ಮತ್ತು ಸುನೀಲ ಶರ್ಮ ಬಂಧಿತರು. ಅವರಿಂದ ₹ 8,200, ದ್ವಿಚಕ್ರವಾಹನ ಮತ್ತು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಕತಿ ಠಾಣೆ ವ್ಯಾಪ್ತಿಯಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ ಪೊಲೀಸರು 7 ಮಂದಿಯನ್ನು ಬಂಧಿಸಿದ್ದಾರೆ. ರಾಮ ಕುಂಬರ್ಗಿ, ಯಲ್ಲೇಶ ಕಿಶೆ, ಶಿವಪ್ಪ ನಾಯ್ಕ, ಸಿದ್ರಾಯಿ ಹಾಲಭಾವಿ, ಜ್ಯೋತಿಬಾ ಕುಮ್ಮನಾಚೆ, ಕರೆಪ್ಪ ಗಿರಣ್ಣವರ ಹಾಗೂ ಸಿದ್ರಾಯಿ ನಾಯ್ಕ ಬಂಧಿತರು. ಅವರಿಂದ ₹ 22,650 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.