ಬೆಳಗಾವಿ: ‘ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ನಿಂದ ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವಿವಿಧ ವೈದ್ಯಕೀಯ ಸಾಮಗ್ರಿಗಳನ್ನು ನೀಡಿರುವುದು ಮಾನವೀಯ ಕಾರ್ಯವಾಗಿದೆ’ ಎಂದು ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್ನಿಂದ ಇಲ್ಲಿನ ದೇವರಾಜ ಅರಸು ಬಡಾವಣೆಯಲ್ಲಿರುವ ನಾಗನೂರು ಶಿವಬಸವೇಶ್ವರ ಟ್ರಸ್ಟ್ನ ಚಿನ್ನಮ್ಮ ಬ. ಹಿರೇಮಠ ವೃದ್ಧಾಶ್ರಮದಲ್ಲಿರುವ 14 ಕೋವಿಡ್ ಸೋಂಕಿತರು ಹಾಗೂ 34 ಹಿರಿಯ ನಾಗರಿಕರಿಗೆ ಸಾಮಗ್ರಿಗಳನ್ನು ವಿತರಣೆ ಮಾಡುವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘₹ 25ಸಾವಿರ ಮೊತ್ತದಲ್ಲಿ ಸ್ಯಾನಿಟೈಸರ್, ಮಾಸ್ಕ್, ಫೇಸ್ ಶೀಲ್ಡ್, ಪಲ್ಸ್ ಆಕ್ಷಿಮೀಟರ್, ರೆಸ್ಪಿರೇಟರಿ ಸ್ಟೀಮರ್, ಕೈಗವಸುಗಳು, ಪಿಪಿಇ ಕಿಟ್, ಔಷಧಿ ಮೊದಲಾದವುಗಳನ್ನು ಕೋವಿಡ್ನಂತಹ ತುರ್ತು ಸಂದರ್ಭದಲ್ಲಿ ಸೋಂಕಿತರಿಗೆ ವಿತರಿಸುವ ಮೂಲಕ ಸ್ತುತ್ಯಾರ್ಹ ಕಾರ್ಯ ಮಾಡಿದ್ದಾರೆ’ ಎಂದರು.

ಟ್ರಸ್ಟ್ನ ಕಾರ್ಯದರ್ಶಿ ಡಾ.ಮಹಾಂತೇಶ ರಾಮಣ್ಣವರ, ‘ಬೈಲಹೊಂಗಲದ ಅಜಯ ಡ್ರಗ್ ಡಿಸ್ಟ್ರಿಬ್ಯೂಟರ್ ಮಾಲೀಕ ಅಜಯ ಸುಮಯ್ಯ ಪೂಜಾರಿ, ಮಕರಜ್ಯೋತಿ ಮೆಡಿಕಲ್ಸ್ ಮಾಲೀಕ ಮಹಾಂತೇಶ ಹಿಟ್ಟಣಗಿ, ಡಾ.ರಾಮಣ್ಣವರ ಚಾರಿಟಬಲ್ ಟ್ರಸ್ಟ್, ಮುರಗೇಶ ಅಳಗುಂಡಗಿ, ಚಂದ್ರಶೇಖರ ಮನೂರ, ಡಾ.ರಮೇಶ ರಾಠೋಡ, ಡಾ.ದೇವೇಂದ್ರ ಹುಲ್ಲೋಳ್ಳಿ, ಡಾ.ಪ್ರಕಾಶ ಮತ್ತಿಕೊಪ್ಪ, ಉಮೇಶ ವಾಸುದೇವ ಮೊಕಾಶಿ, ಮಹಾಂತೇಶ ಪರಮಶೆಟ್ಟಿ, ಡಾ.ದುರ್ಗಪ್ಪ, ಬೈಲಹೊಂಗಲದ ಮಹಾಂತ ಟ್ರೇಡರ್ಸ್ ಮಾಲೀಕ ಮಹಾಂತೇಶ ಶಿಲವಂತರ ನೆರವಿನಿಂದ ಅಗತ್ಯ ವಸ್ತುಗಳನ್ನು ವೃದ್ಧಾಶ್ರಮಕ್ಕೆ ನೀಡಲಾಗಿದೆ’ ಎಂದರು.

ಕಿರಣ ಚೌಗಲಾ ಮಾತನಾಡಿದರು. ಸಂಯೋಜಕ ಎಂ.ಎಸ್. ಚೌಗಲಾ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಡಾ.ಡಿ.ಎನ್. ಮಿಸಾಳೆ, ಐಎಂಎ ಬೆಳಗಾವಿ ಅಧ್ಯಕ್ಷ ಡಾ.ಅನಿಲ ಪಾಟೀಲ, ಪ್ರವೀಣ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.