ಮಂಗಳವಾರ, ಮಾರ್ಚ್ 2, 2021
23 °C

ಏಕಸ್‌ನಲ್ಲಿ ಪ್ರಮುಖ ಮೈಲುಗಲ್ಲು ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಇಲ್ಲಿನ ಏಕಸ್‌ ಏರೊಸ್ಪೇಸ್ ಮತ್ತು ಸಾಬ್ ಎಬಿಯ ಜಂಟಿ ಸಹಯೋಗದ ಏರೊಸ್ಟ್ರಕ್ಚರ‍್ಸ್ ಅಸೆಂಬ್ಲೀಸ್ (ಎಎಐಪಿಎಲ್), ಓವರ್ ವಿಂಗ್ ಎಕ್ಸಿಟ್ ಡೋರ‍್ಸ್ (ಒಡಬ್ಲ್ಯುಇಡಿ), ಸ್ಕೆಲೆಟನ್ ಅಸೆಂಬ್ಲೀಸ್ ಮತ್ತು ಡೋರ್‌3ಪ್ಲಗ್ಸ್ 100ನೇ ಶಿಪ್‌ಸೆಟ್ ಪೂರ್ಣಗೊಂಡ ಪ್ರಮುಖ ಮೈಲುಗಲ್ಲನ್ನು ಸಾಧಿಸಿದೆ.

‘ಈ ಶಿಪ್‌ಸೆಟ್ಸ್ ಎಎಐಪಿಎಲ್ ಸಕಾಲಕ್ಕೆ ಪೂರ್ಣಗೊಂಡಿದ್ದು ಡಿ3ಪಿಯ ಸಂಕೀರ್ಣ ಅಸೆಂಬ್ಲಿಯಲ್ಲಿ ಕಂಪನಿಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿದೆ ಮತ್ತು ಅತ್ಯಂತ ತೀವ್ರ ಕೈಗಾರಿಕೀಕರಣ ಹಾಗೂ ಒಡಬ್ಲ್ಯೂಇಡಿಯ ಉನ್ನತ ನಿರ್ಮಾಣದ ಪ್ರಮಾಣ ಹೊಂದಿದೆ. ಈ ಎರಡೂ ಪ್ರಾಜೆಕ್ಟ್‌ಗಳು ಗಮನಾರ್ಹ ಮೈಲುಗಲ್ಲನ್ನು 29 ತಿಂಗಳಲ್ಲಿ (ಡಿ3ಪಿ) ಮತ್ತು 11 ತಿಂಗಳಲ್ಲಿ (ಒಡಬ್ಲ್ಯುಇಡಿ) ಸಾಧಿಸಿದೆ. ಡಿ3ಪಿ ಅಸೆಂಬ್ಲಿ ಸೂಕ್ಷ್ಮವಾದ ಬಿಲ್ಡ್-ಟು-ಪ್ರಿಂಟ್ ಅಸೆಂಬ್ಲಿ ಮತ್ತು ಒಡಬ್ಲ್ಯುಇಡಿ ಸ್ಕೆಲೆಟನ್ ಆಳವಾದ ಬಿಲ್ಡ್ ರೇಟ್ ಅಗತ್ಯವನ್ನು ಹೊಂದಿದೆ’ ಎಂದು ಕಂಪನಿ ತಿಳಿಸಿದೆ.

ಇಲ್ಲಿ ನಡೆದ ಕಾರ್ಯಕ್ರಮದ ವೇಳೆ ಏರ್‌ಬಸ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರೆಮಿ ಮೈಲ್ಲಾರ್ಡ್, ಬೆಳಗಾವಿಯ ಏಕಸ್‌ ಎಸ್‌ಇಝಡ್ ಭಾರತ ಮತ್ತು ದಕ್ಷಿಣ ಏಷ್ಯಾದ ಹೆಡ್ ಆಫ್ ಪ್ರೊಕ್ಯೂರ್‌ಮೆಂಟ್ ಥಿಯೆರ್ರಿ ಕ್ಲೌಟೆಟ್ ಶುಭ ಹಾರೈಸಿದರು.

ಏಕಸ್ ಏರೊಸ್ಪೇಸ್‌ನ ಎಂ.ಡಿ. ಮತ್ತು ಸಿಇಒ ರಾಜೀವ್ ಕೌಲ್, ‘ಪ್ರಮುಖ ಮೈಲುಗಲ್ಲನ್ನು ತಲುಪಿರುವುದರಿಂದ ಬಹಳ ಹೆಮ್ಮೆಯಾಗಿದೆ. ಏರ್‌ಬಸ್ ಪ್ರಮುಖ ಗ್ರಾಹಕನಾಗಿದೆ ಮತ್ತು ಸಾಬ್ ಸಹಯೋಗದೊಂದಿಗೆ ಈ 100 ಶಿಪ್‌ಸೆಟ್ಸ್ ಪೂರೈಕೆಯು ಅತ್ಯಂತ ತೀವ್ರವಾದ ಗ್ರಾಹಕರ ಆದ್ಯತೆಗೆ ಸಾಕ್ಷಿಯಾಗಿದೆ. ಕೋವಿಡ್ ಸಾಂಕ್ರಾಮಿಕದಿಂದ ಎದುರಾದ ಸವಾಲುಗಳ ನಡುವೆಯೂ ನಾವು ಪ್ರಾಜೆಕ್ಟ್‌ಗಳನ್ನು ಸಕಾಲಕ್ಕೆ ಪೂರ್ಣಗೊಳಿಸಲು ಶಕ್ತರಾಗಿದ್ದೇವೆ. ಇದು ಕಠಿಣವಾದ ಗ್ರಾಹಕ ಅಗತ್ಯಗಳ ನಡುವೆಯೂ ಪೂರೈಕೆಗೆ ನಮ್ಮ ಬದ್ಧತೆಯನ್ನು ತೋರುತ್ತದೆ. ಇದು ನಮ್ಮ ಎಂಜಿನಿಯರಿಂಗ್ ಶಕ್ತಿ ಮತ್ತು ಭಾರತದಲ್ಲಿ ಸಂಕೀರ್ಣ ಏರೋಸ್ಟ್ರಕ್ಚರ್ ಅಸೆಂಬ್ಲಿಗಳನ್ನು ಕೈಗೊಳ್ಳಲು ಸಾಮರ್ಥ್ಯಕ್ಕೆ ದೃಢೀಕರಣವಾಗಿದೆ’ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು