ಬೆಳಗಾವಿ: ‘ಸೆ.15ರಂದು ಆಚರಿಸಲಾಗುವ ‘ವಿಶ್ವ ಪ್ರಜಾಪ್ರಭುತ್ವ ದಿನ’ದ ಅಂಗವಾಗಿ ಜಿಲ್ಲೆಯಲ್ಲಿ ಕೂಡ 135 ಕಿ.ಮೀ ಉದ್ದದಷ್ಟು ಮಾನವ ಸರಪಣಿ ನಿರ್ಮಿಸಲಾಗುವುದು’ ಎಂದು ಜಿಲ್ಲಾ ಉಸ್ತುವರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಬೀದರಿನಿಂದ ಚಾಮರಾಜನಗರ ವರೆಗೆ 2,500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪ್ರಜಾಪ್ರಭುತ್ವ ಮಹತ್ವ ಸಾರಲು ಇದನ್ನು ಯಶಸ್ವಿಗೊಳಿಸಬೇಕು’ ಎಂದರು.
‘ಜಿಲ್ಲೆಯ ಎಲ್ಲ ಶಾಲೆ– ಕಾಲೇಜು ಮಕ್ಕಳು, ಗ್ರಾಮ ಪಂಚಾಯಿತಿ ಸದಸ್ಯರು, ಇಲಾಖೆಗಳ ಸಿಬ್ಬಂದಿ, ಕಲಾವಿದರು ಸೇರಿದಂತೆ ಎಲ್ಲರನ್ನೂ ಸೇರಿಸಬೇಕು. ಅಂದು ಬೆಳಿಗ್ಗೆ 8.30ರಿಂದ 9.30ರವರೆಗೆ ಒಂದು ತಾಸು ಮಾತ್ರ ಇದನ್ನು ಮಾಡಲಾಗುವುದು’ ಎಂದರು.
‘ಮೇಲಿಂದ ಮೇಲೆ ದೆಹಲಿಗೆ ಏಕೆ ಹೋಗುತ್ತಿದ್ದೀರಿ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ಇಲಾಖೆಯ ಕೆಲಸಗಳು ಇದ್ದ ಕಾರಣ ಹೋಗಿದ್ದೆ’ ಎಂದರು.