ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಕ್ಕೇರಿ: ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ

Published : 10 ಸೆಪ್ಟೆಂಬರ್ 2024, 14:24 IST
Last Updated : 10 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಹುಕ್ಕೇರಿ: ತಾಲ್ಲೂಕಿನ ಎಲಿಮುನ್ನೋಳಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಜನರ ಅಹವಾಲುಗಳನ್ನು ಆಲಿಸಿದರು.

ಗ್ರಾಮದ ಕುರುಬ ಸಮಾಜದವರು ಕುರಿಗಳಿಗೆ ಔಷಧಿ ಅಲಭ್ಯ ಕುರಿತು, ಲಕ್ಷ್ಮಿ ದೇವಿ ಟ್ರಸ್ಟ್ ಕಮಿಟಿಯವರು ಸಮುದಾಯ ಭವನ ನಿರ್ಮಾಣದ ಬಗ್ಗೆ, ರೈತರ ಸೇವಾ ಸಂಘದ ಪತ್ತು ಬಿಡುಗಡೆ ಮಾಡುವ ಕುರಿತು, ಹಾಗೂ ಗ್ರಾಮದ ಎಲ್ಲಮ್ಮದೇವಿ ಮಂದಿರದ ಜಿರ್ಣೋದ್ಧಾರ, ಗ್ರಾಮದ ಬಾವಿಗಳಿಗೆ ತಡೆಗೋಡೆ ನಿರ್ಮಿಸುವ ಕುರಿತು ಸಲ್ಲಿಸಿದ ಮನವಿ ಸ್ವೀಕರಿಸಿದರು.

ಗ್ರಾಮದಲ್ಲಿನ ವಿವಿಧ ಸಮಸ್ಯೆ ಕುರಿತು ಹೇಳಿಕೆಗಳನ್ನು ಆಲಿಸಿದರು.

ಸತ್ಕಾರ: ಗ್ರಾಮಸ್ಥರ ಪರವಾಗಿ ರೈತ ಸೇವಾ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಪಂಚಮಸಾಲಿ ಉಪಾಧ್ಯಕ್ಷ ವಿರೂಪಾಕ್ಷ ಮರೆನ್ನವರ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

ಗ್ರಾಮ ಪಂಚಾಯ್ತಿ ಅಧ್ಯಕ್ಷ ಮೀರಾ ಸಾಹೇಬ್ ಮುಲ್ತಾನಿ, ನೇರಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನೀಲೇಶ್ ಜಾಧವ್, ಜಿಲ್ಲಾ ಕೆಡಿಪಿ ಸದಸ್ಯ ಬಸವರಾಜ ಕೋಳಿ, ಸಂಕೇಶ್ವರ ಬ್ಲಾಕ್ ಅಧ್ಯಕ್ಷ ಸಂತೋಷ್ ಮುಡಶಿ, ಹುಕ್ಕೇರಿ ಕಾಂಗ್ರೆಸ್ ಬ್ಲಾಕ್ ಮಾಜಿ ಅಧ್ಯಕ್ಷ ರವಿ ಕರಾಳೆ, ಎಸ್.ಎಲ್.ಪಾಟೀಲ್, ಮಲಗೌಡ ದೇಸಾಯಿ, ಸಚಿವರ ಆಪ್ತ ಕಾರ್ಯದರ್ಶಿ ಪಾಂಡು ಮನ್ನಿಕೆರಿ, ಮುಖಂಡ ಇಲಿಯಾಸ್ ಬೇಗ್‌ ಇನಾಂದಾರ್‌, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಸುರೇಶ್ ಹುಣಚ್ಯಾಳಿ, ಸಂದೀಪ್ ಪಾಟೀಲ್, ಅವಿನಾಶ್ ನಲವಡೆ, ದಿಲೀಪ್ ಹೊಸಮನಿ, ಮಹೇಶ್ ಹಟ್ಟಿಹೋಳಿ, ಕಾಂಗ್ರೆಸ್ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT