ಮೂಡಲಗಿ: ‘ಮೂಡಲಗಿ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ನಿಲ್ದಾಣ ಅಧಿಕಾರಿಗಳು, ಮೂಡಲಗಿಯ ನಿಸರ್ಗ ಫೌಂಡೇಶನ ಹಾಗೂ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದಿಂದ ಶನಿವಾರ ಬಸ್ ಚಾಲಕರನ್ನು ಶಾಲು ಹೊದಿಸಿ, ಸಿಹಿ ವಿತರಿಸಿ ಅವರನ್ನು ಗೌರವಿಸುವ ಮೂಲಕ ಬಸ್ ಚಾಲಕರ ದಿನಾಚರಣೆಯನ್ನು ಆಚರಿಸಿದರು.

ಸಾರಿಗೆ ಇಲಾಖೆಯ ಚಾಲಕರಾದ ಎನ್.ಎಲ್. ನದಾಫ, ಬಾಬಾಸಾಹೇಬ ಕಾಂಬಳೆ, ಟಿ.ಎಸ್.ಬಿರಾದಾರ, ಎಂ.ಡಿ.ಹಿಪ್ಪರಗಿ, ಎ.ಎಂ.ಬಿಳೂಂಡಗಿ, ಎಸ್.ಎನ್.ಪಿರಜಾದೆ, ಎಸ್.ಎಸ್. ಟೊನಪೆ ಅವರನ್ನು ಸನ್ಮಾನಿಸಿದರು.

ಬಸ್ ನಿಲ್ದಾಣ ನಿಯಂತ್ರಣಾಧಿಕಾರಿ ಬಿ.ಬಿ.ದಂಡಾಪೂರ ಮಾತನಾಡಿ, 'ಬಸ್ ಚಾಲಕರು ಹಗಲು, ರಾತ್ರಿ ಎನ್ನದೆ ತಮ್ಮ ಮನೆ, ಕಟುಂಬದಿಂದ ಇಡೀ ದಿನ ದೂರವಿದ್ದು ಜನರನ್ನು ಸುಗಮವಾಗಿ ಅವರ ಸ್ಥಳಗಳಿಗೆ ತಲುಪಿಸುವಂತ ತ್ಯಾಗ ಮನೋಭಾವದ ಕಾರ್ಯವು ಶ್ಲಾಘನೀಯವಾಗಿದೆ ಎಂದರು.

ಚಾಲಕರು ತಮ್ಮ ಕರ್ತವ್ಯದಲ್ಲಿ ಊಟ, ನಿದ್ರೆಯ ಚಿಂತೆ ಇಲ್ಲ. ಆರೋಗ್ಯವನ್ನು ಅನುಲಕ್ಷಿಸಿ ಮತ್ತು ರಸ್ತೆಗಳಲ್ಲಿ ವಾಹನಗಳ ಸಂಚಾರದ ದಟ್ಟಣೆಯಲ್ಲಿ ಜನರನ್ನು ಸುರಕ್ಷಿತವಾಗಿ ಒಯ್ಯುವಂತ ಅತ್ಯಂತ ದಕ್ಷತೆಯಿಂದ ಸೇವೆಯನ್ನು ಮಾಡುವರು. ಬಸ್ ಚಾಲಕರು ಪ್ರಯಾಣಿಕರ ಜೀವ ರಕ್ಷಕರು ಆಗಿದ್ದಾರೆ ಎಂದರು.

ನಿಸರ್ಗ ಫೌಂಡೇಶನ್ದ ಅಧ್ಯಕ್ಷ ಈರಪ್ಪ ಢವಳೇಶ್ವರ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಾ ಗಿರೆಣ್ಣವರ, ಬಾಲಶೇಖರ ಬಂದಿ ಚಾಲಕರ ಮೇಲೆ ಪುಷ್ಪವೃಷ್ಟಿ ಮಾಡಿ ಶುಭಕೋರಿದರು.

ನಿಲ್ದಾಣಧಾರಿ ಶ್ರೀಶೈಲ್ ದೇಸರಟ್ಟಿ, ಮಾರುತಿ ಹಡಪದ, ನಿವೃತ್ತ ನಿವರ್ಾಹಕ ಜೆ.ವಿ. ಮಾನೆ, ಸುರೇಶ ಭಜಂತ್ರಿ, ಸುರೇಶ ಮಡಿವಾಳರ, ಶಿವಬಸು ಮೋರೆ, ಸೈಫನ್ ಜಾತಿಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.