ಸೋಮವಾರ, ಆಗಸ್ಟ್ 2, 2021
21 °C

ಮುಧೋಳ ನಗರಸಭೆ ಅಧ್ಯಕ್ಷ ಸಿದ್ಧನಾಥ ಮಾನೆ ಕೋವಿಡ್‌ನಿಂದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV Photo

ಬಾಗಲಕೋಟೆ: ಇಲ್ಲಿನ ಮುಧೋಳದ ನಗರಸಭೆ ಅಧ್ಯಕ್ಷ ಸಿದ್ಧನಾಥ (ಸಂಜು) ದಾದಾಸಾಹೇಬ್ ಮಾನೆ (32) ಕೋವಿಡ್ ಸೋಂಕಿನಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನ ಹೊಂದಿದರು.

ಮುಧೋಳದ ವಾರ್ಡ್ ನಂ. 18 ರಿಂದ ಮೊದಲ ಬಾರಿಗೆ ಬಿಜೆಪಿಯಿಂದ ಆಯ್ಕೆಯಾಗಿದ್ದ ಅವರಿಗೆ ಕಿರಿಯ ವಯಸ್ಸಿನಲ್ಲಿಯೇ ನಗರಸಭೆ ಅಧ್ಯಕ್ಷರಾಗುವ ಅವಕಾಶ ಒಲಿದು ಬಂದಿತ್ತು.

ರಾಷ್ಟ್ರಮಟ್ಟದ ಕುಸ್ತಿಪಟು ಆಗಿದ್ದ ಅವರು ಎರಡು ಬಾರಿ ಕರ್ನಾಟಕ ಕೇಸರಿ ಹಾಗೂ ಒಂದು ಬಾರಿ ಕರ್ನಾಟಕ ಕಂಠೀರವ ಪ್ರಶಸ್ತಿಗೆ ಭಾಜನರಾಗಿದ್ದರು.

ಸಿದ್ಧನಾಥ ಮಾನೆ ಅವರ ತಾಯಿ ರಾಧಾಬಾಯಿ ಮಾನೆ ಕೂಡಾ ಕೋವಿಡ್ ಸೋಂಕಿನಿಂದ ಮೇ 20ರಂದು ನಿಧನರಾಗಿದ್ದರು. ಮೂರು ದಿನಗಳಲ್ಲಿಯೇ ಪುತ್ರನೂ ಸಾವನ್ನಪ್ಪಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಿದ್ದನಾಥ ಮಾನೆ ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಪುತ್ರಿ ಇದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು