ಶನಿವಾರ, ಜನವರಿ 25, 2020
22 °C

ಪ್ರಿಯತಮನಿಗಾಗಿ ಪುತ್ರನನ್ನೇ ಕೊಂದ ಆರೋಪ: ಮಹಿಳೆ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ಪ್ರಿಯತಮನ ಸಂಬಂಧಕ್ಕಾಗಿ ಪುತ್ರನನ್ನು ಕೊಂದು, ಪತಿಯ ಅಣ್ಣನ ಪತ್ನಿಯನ್ನು ಮಲಗಿದ್ದಾಗಲೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟ’ ಆರೋಪದ ಮೇಲೆ ತಾಯಿ ಹಾಗೂ ಯುವಕನನ್ನು ಹುಕ್ಕೇರಿ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಹುಕ್ಕೇರಿ ತಾಲ್ಲೂಕು ಬೆಲ್ಲದ ಬಾಗೇವಾಡಿಯ ಸುಧಾ ಕರಿಗಾರ ಹಾಗೂ ರಮೇಶ ಅಲಿಯಾಸ್ ರಾಮ ಬಸ್ತವಾಡೆ ಬಂಧಿತರು. ಭಾಗ್ಯಶ್ರೀ ಹಾಗೂ ಪ್ರವೀಣ ಮೃತರು. ಸಹಜ ಸಾವು ಎಂದು ಬಿಂಬಿಸಲಾಗಿದ್ದ ಈ ಪ್ರಕರಣಗಳನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ ನಂತರ ಆರೋಪಿಗಳು ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ.

ಪ್ರವೀಣನ ಕೊಲೆ ಅ.22ರಂದು ನಡೆದಿತ್ತು. ಭಾಗ್ಯಶ್ರೀ ಅವರನ್ನು ಡಿ. 8ರಂದು ರಾತ್ರಿ ಮನೆಯಲ್ಲೇ ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಲಾಗಿತ್ತು. ಆ ಬಗ್ಗೆ ಭಾಗ್ಯಶ್ರೀ ಪತಿ ಚನ್ನಪ್ಪ ಕರಿಗಾರ ಠಾಣೆಗೆ ದೂರು ನೀಡಿದ್ದರು. ರಮೇಶ ಹಾಗೂ ತನ್ನ ನಡುವೆ ಇದ್ದ ಅನೈತಿಕ ಸಲುಗೆ ಗುಟ್ಟು ರಟ್ಟಾಗದಂತೆ ನೋಡಿಕೊಳ್ಳಲು ಸುಧಾ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು