ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಸೀಮಂತ; ಖಾದ್ಯಗಳ ಘಮಲು 

Last Updated 22 ಸೆಪ್ಟೆಂಬರ್ 2020, 2:14 IST
ಅಕ್ಷರ ಗಾತ್ರ

ಮೂಡಲಗಿ: ಚಪಾತಿ, ಜೋಳ, ಗೊಂಜಾಳ, ಸಜ್ಜೆ ರೊಟ್ಟಿ, ಶೇಂಗಾ, ಸಜ್ಜಕದ ಹೋಳಿಗೆ, ಖರ್ಚಿಕಾಯಿ, ತಾಲಿಪೆಟ್ಟು, ಶೇಂಗಾ, ಕೆಂಪುಖಾರ, ಎಣಿಗಾಯಿ, ಹಿರೇಕಾಯಿ ಹೀಗೆ ತರಹೇವಾರಿ ಖಾದ್ಯಗಳ ಹೆಸರು ಹೇಳುತ್ತಿದ್ದಂತೆ ಬಾಯಲ್ಲಿ ನೀರೂರಿಸುವುದು ಸಹಜ.

ಇದೆಲ್ಲವನ್ನು ತಾಲ್ಲೂಕಿನ ಕಲ್ಲೋಳಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ರಾಷ್ಟ್ರೀಯ ಪೌಷ್ಠಿಕ ಆಹಾರ ಮತ್ತು ಪೋಷಣಾ ಅಭಿಯಾನ ಮಾಸಾಚರಣೆಯಲ್ಲಿ ಗರ್ಭಿಣಿಯರಿಗೆ ಮಾಡಿದ್ದು ತಿನಿಸುಗಳು.

ಇವುಗಳ ಜೊತೆಗೆ ಮೊಳೆಕೆಯೊಡೆದ ಮಡಕೆಕಾಳು, ಕಡಲೆ, ಅವರೆ, ಅಲಸಂದಿಗಳ ಪಲ್ಯ, ಮೂಲಂಗಿ, ಗಜ್ಜರಿ, ಸವತಿಕಾಯಿಗಳ‌ ಸಲಾಡ್‌. ಪಟ್ಟಣದಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳ ಸಹಯೋಗದಲ್ಲಿ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಮತ್ತು ಉಡಿತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

‘ಗರ್ಭಿಣಿಯರು, ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡುವುದು ಹಾಗೂ ಅವರಲ್ಲಿ ರಕ್ತಹೀನತೆ, ಅಪೌಷ್ಟಿಕತೆ ತಡೆಗಟ್ಟುವುದು, ಆರೋಗ್ಯಪೂರ್ಣ ಮಗುವಿನ ಜನನಕ್ಕೆ ನೆರವಾಗುವುದು ಕಾರ್ಯಕ್ರಮದ ಉದ್ದೇಶ‘ ಎಂದು ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಐ.ಡಿ. ಭೋವಿ ತಿಳಿಸಿದರು.

ಅಂಗನವಾಡಿ ಮೇಲ್ವಿಚಾರಕಿ ಚಂಪಾ ಸುಣಗಾರ, ಕಾರ್ಯಕರ್ತೆಯರಾದ ಶಿಲ್ಪಾ ಸೋಮನಟ್ಟಿ, ಅವಕ್ಕ ಬಡಿಗೇರ, ಪ್ರೇಮಾ ಹತಪಕಿ, ರಜಾನ ನದಾಫ, ಮಂಗಲಾ ಪತ್ತಾರ, ದೀಪಾ ಪತ್ತಾರ, ಕಾಶವ್ವಾ ಕುಂಬಾರ, ರತ್ನಾ ಕಂಕಣವಾಡಿ ಪಾಲ್ಗೊಂಡಿದ್ದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ರುಕ್ಮವ್ವ ನಾಂವಿ, ಯಮನವ್ವ ದಾಸನಾಳ, ಮಹಾದೇವಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT