ಶುಕ್ರವಾರ, ಅಕ್ಟೋಬರ್ 22, 2021
29 °C

ಯಲ್ಲಮ್ಮನಗುಡ್ಡ: ನವರಾತ್ರಿ ಉತ್ಸವ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ: ಯಲ್ಲಮ್ಮನಗುಡ್ಡದಲ್ಲಿ ನವರಾತ್ರಿ ಉತ್ಸವ ಗುರುವಾರದಿಂದ ಆರಂಭಗೊಂಡಿತು.

ರೇಣುಕಾ ಯಲ್ಲಮ್ಮ ದೇವಸ್ಥಾನದ ಗರ್ಭಗುಡಿ ಮುಂಭಾಗದಲ್ಲಿ ದೀಪ ಹಚ್ಚುವ ಮೂಲಕ ‘ಘಟಸ್ಥಾಪನೆ ಕಾರ್ಯಕ್ರಮ’ಕ್ಕೆ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ನಾಡಿನಲ್ಲಿ ಉತ್ತಮ ಮಳೆಯಾಗಲಿ. ಸರ್ವರ ಬಾಳು ಸಮೃದ್ಧವಾಗಲಿ. ಕೊರೊನಾ ಸಂಕಷ್ಟ ದೂರಾಗಲಿ’ ಎಂದು ಪ್ರಾರ್ಥಿಸಿದರು.

ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ದೇಶಕ್ಕೆ ಬಂದೆರಗಿರುವ ಕೋವಿಡ್ ಸಂಕಷ್ಟ ನಿವಾರಣೆಯಾಗಲಿ. ಜನಜೀವನ ಸಹಜ ಸ್ಥಿತಿಗೆ ಬರಲಿ’ ಎಂದು ಆಶಿಸಿದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ‘ಕೊರೊನಾ ವೈರಾಣು ಹರಡುವಿಕೆ ನಿಯಂತ್ರಣಕ್ಕಾಗಿ ಯಲ್ಲಮ್ಮ ದೇಗುಲದಲ್ಲಿ ಮಾರ್ಗಸೂಚಿ ಪಾಲನೆಗೆ ಒತ್ತು ನೀಡಲಾಗಿದೆ. ಭಕ್ತರು ಸಹಕರಿಸಬೇಕು. ಅಂತರ ಕಾಯ್ದುಕೊಂಡು ಸರದಿ ಸಾಲಿನಲ್ಲಿ ದೇವಿ ದರ್ಶನ ಪಡೆಯಬೇಕು’ ಎಂದು ಕೋರಿದರು.

ಯಲ್ಲಮ್ಮ ದೇವಸ್ಥಾನದ ಇಒ ರವಿ ಕೋಟಾರಗಸ್ತಿ, ಗಂಗಮ್ಮತಾಯಿ ಮಾಮನಿ, ಆಶಾತಾಯಿ ಕೋರೆ, ರತ್ನಮ್ಮ ಮಾಮನಿ, ಡಾ.ಪ್ರೀತಿ ದೊಡವಾಡ, ಡಿವೈಎಸ್‌ಪಿ ರಾಮನಗೌಡ ಹಟ್ಟಿ, ವರ್ಷಾ ಗಾಂವಕರ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐ ಶಿವಾನಂದ ಗುಡನಟ್ಟಿ, ಎಚ್.ಸಿ. ಸಿದ್ದಸಮುದ್ರ, ಎಂ.ವಿ. ಗುಂಡಪ್ಪಗೂಳ, ಯಲ್ಲಪ್ಪ ಕಾಳಪ್ಪನವರ, ವಿರೂಪಾಕ್ಷ ಹನಸಿ, ಕೊಳ್ಳಪ್ಪಗೌಡ ಗಂದಿಗವಾಡ, ನಾಗರತ್ನಾ ಚೋಳಿನ, ಅರವಿಂದ್ರ ಮಾಳಗೆ, ಸದಾನಂದ ಈಟಿ, ಆರ್.ಎಚ್. ಸವದತ್ತಿ, ಅಲ್ಲಮಪ್ರಭು ಪ್ರಭುನವರ, ಭೀಮಣ್ಣ ಬಾರ್ಕಿ, ಅನ್ನಪೂರ್ಣ ತೋಲಗಿ ಇದ್ದರು.

ನವರಾತ್ರಿಯ ಮೊದಲ ದಿನ ಯಲ್ಲಮ್ಮನ ಸನ್ನಿಧಿಗೆ ಭಕ್ತಸಾಗರ ಹರಿದುಬಂತು. ಮಳೆಯನ್ನೂ ಲೆಕ್ಕಿಸದೆ ಭಕ್ತರು ದೇವಿ ದರ್ಶನಕ್ಕೆ ಸಾಲಿನಲ್ಲಿ ಬಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.