ಬೆಳಗಾವಿ: ಜಿಲ್ಲೆಯ ಘಟಪ್ರಭಾ ಮತ್ತು ಚಿಕ್ಕೋಡಿ ನಡುವಿನ ಜೋಡಿ ರೈಲು ಮಾರ್ಗವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಸಾರ್ವಜನಿಕ ಬಳಕೆಗೆ ಸಮರ್ಪಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ರಾಯಬಾಗ ಶಾಸಕ ಡಿ.ಎಂ. ಐಹೊಳೆ ಭಾಗವಹಿಸಿದ್ದಾರೆ.

‘ಲೋಂಡಾ–ಮೀರಜ್ ಜೋಡಿ ರೈಲು ಮಾರ್ಗದ ಮೊದಲ ಹಂತ (16 ಕಿ.ಮೀ.) ಪೂರ್ಣಗೊಂಡಂತಾಗಿದೆ. ಈ ಮಾರ್ಗವು ಘಟಪ್ರಭಾ, ಬಾಗೇವಾಡಿ (ತಂಗುದಾಣ) ಹಾಗೂ ಚಿಕ್ಕೋಡಿ ನಿಲ್ದಾಣಗಳನ್ನು ಒಳಗೊಂಡಿದೆ. ಹೆಚ್ಚಿನ ರೈಲುಗಳು ಓಡಾಡುವುದಕ್ಕೆ ಅನುಕೂಲವಾಗುವಂತಹ ಹೆಚ್ಚಿನ ಸಾಮರ್ಥ್ಯವನ್ನು ಮಾರ್ಗ ಹೊಂದಿದೆ. ರೈಲುಗಳು ಕ್ರಾಸ್ ಮಾಡುವುದಕ್ಕೆ ಇನ್ಮುಂದೆ ಕಾಯುವ ಅಗತ್ಯವಿರುವುದಿಲ್ಲ’ ಎಂದು ಅಂಗಡಿ ತಿಳಿಸಿದರು.

ರೈಲು ನಿಲ್ದಾಣದಲ್ಲಿ ‘ತಾಯಿಯ ಮಡಿಲು’

ಬೆಳಗಾವಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನ ಹಾಗೂ ರೈಲ್ವೆ ಇಲಾಖೆ ಸಹಕಾರದೊಂದಿಗೆ ‘ತಾಯಿ ಮಡಿಲು’ ಕಾರ್ಯಕ್ರಮವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಬುಧವಾರ ಉದ್ಘಾಟಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ, ಶಾಸಕ ಅನಿಲ ಬೆನಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.