ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಚಿ– ರಾಯಬಾಗ ಜೋಡಿ ಮಾರ್ಗ ಪೂರ್ಣ

Last Updated 19 ಮಾರ್ಚ್ 2021, 11:16 IST
ಅಕ್ಷರ ಗಾತ್ರ

ಬೆಳಗಾವಿ: ಕುಡಚಿ–ರಾಯಬಾಗ ರೈಲು ನಿಲ್ದಾಣಗಳ ನಡುವೆ (17 ಕಿ.ಮೀ) ಹೊಸದಾಗಿ ನಿರ್ಮಿಸಿರುವ ಜೋಡಿ ಮಾರ್ಗವನ್ನು ರೈಲ್ವೆ ಇಲಾಖೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ (ಸಿಆರ್‌ಎಸ್‌) ಎ.ಕೆ. ರಾಯ್‌ ಈಚೆಗೆ ಪರಿಶೀಲಿಸಿದರು.

2015–16ನೇ ಸಾಲಿನಲ್ಲಿ ಮಂಜೂರಾಗಿರುವ 3,627.47 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಲೋಂಡಾ–ಮೀರಜ್‌ ನಡುವಣ ಜೋಡಿ ರೈಲು ಮಾರ್ಗದ (186 ಕಿ.ಮೀ.) ಕಾಮಗಾರಿಯ ಭಾಗ ಇದಾಗಿದೆ. ಅಧಿಕಾರಿಗಳು ಮೊದಲು ಮೋಟಾರ್‌ ಟ್ರ್ಯಾಲಿ ಮೂಲಕ ಪರಿಶೀಲಿಸಿದ ಬಳಿಕ ಗಂಟೆಗೆ 130 ಕಿ.ಮೀ. ವೇಗದಲ್ಲಿ ಸ್ಪೀಡ್ ಟ್ರಯಲ್‌ ನಡೆಸಿದರು. ಈ ಪ್ರಕ್ರಿಯೆ ಸುಗಮ ಹಾಗೂ ಯಶಸ್ವಿಯಾಗಿ ನಡೆದಿದೆ.

ಈ ಮಾರ್ಗದಲ್ಲಿ 2 ದೊಡ್ಡ ಹಾಗೂ 20 ಸಣ್ಣ ಸೇತುವೆಗಳು, 4 ರಸ್ತೆ ಕೆಳಸೇತುವೆ ಹಾಗೂ ಒಂದು ನಾಲಾ ಸೇತುವೆ ಬರುತ್ತದೆ. 4 ಲೆವಲ್‌ ಕ್ರಾಸಿಂಗ್‌ಗಳಿವೆ. ಇದರೊಂದಿಗೆ ಜೋಡಿ ಮಾರ್ಗದಲ್ಲಿ ಮುಕ್ತಾಯವಾದ ಮೂರನೇ ಸೆಕ್ಷನ್ ಇದಾಗಿದೆ. ಘಟಪ್ರಭಾದಿಂದ ಚಿಕ್ಕೋಡಿ ರಸ್ತೆ (16 ಕಿ.ಮೀ.) ಹಾಗೂ ಚಿಕ್ಕೋಡಿ ರಸ್ತೆಯಿಂದ– ರಾಯಬಾಗ (14 ಕಿ.ಮೀ)ವರೆಗಿನ ಜೋಡಿ ಮಾರ್ಗ ಈಗಾಗಲೇ ಪೂರ್ಣಗೊಂಡಿದೆ.

ಉಪ ರೈಲ್ವೆ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಹಾಗೂ ಅಧಿಕಾರಿಗಳು ಜೊತೆಗಿದ್ದರು.

ಬೆಂಗಳೂರು–ಮುಂಬೈ ನಡುವಣ ಮಾರ್ಗದ ಸಂಪರ್ಕ ಸುಧಾರಣೆಗಾಗಿ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಹೆಚ್ಚಿನ ಮುತುವರ್ಜಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT