ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ | ಶೋಭಾಯಾತ್ರೆ: ಮೊಳಗಿದ ‘ರಾಮ’ ಜೈಕಾರ

Published 21 ಜನವರಿ 2024, 15:24 IST
Last Updated 21 ಜನವರಿ 2024, 15:24 IST
ಅಕ್ಷರ ಗಾತ್ರ

ನಿಪ್ಪಾಣಿ: ‘500 ವರ್ಷಗಳ ಕನಸು ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯೊಂದಿಗೆ ನನಸಾಗುತ್ತಿದೆ. ಈ ಪ್ರಯುಕ್ತ ಸೋಮವಾರ ನಗರದಲ್ಲಿ ಪ್ರತಿಯೊಬ್ಬರೂ ತಮ್ಮ ಮನೆ ಮುಂದೆ ದೀಪ ಬೆಳಗುವ ಮೂಲಕ ಶ್ರದ್ಧಾಭಕ್ತಿ ಹಾಗೂ ಶಾಂತಿಯಿಂದ ಹಬ್ಬದಂತೆ ಆಚರಿಸಬೇಕು’ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳ(ವಿಎಸ್‍ಎಂ)ದ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಹೇಳಿದರು.

ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಉದ್ಘಾಟನೆ ಅಂಗವಾಗಿ ಮಂಡಳದ ಎಲ್ಲ ಅಂಗಂಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಜರುಗಿದ ಬೈಸಿಕಲ್ ಮತ್ತು ಬೈಕ್ ಶೋಭಾಯಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಮಂಡಳದ ಕಾರ್ಯದರ್ಶಿ ಹರಿಶ್ಚಂದ್ರ ಶಾಂಡಗೆ ಮತ್ತು ಉಪಕಾರ್ಯಾಧ್ಯಕ್ಷ ಪಪ್ಪು ಪಾಟೀಲ ಮಂಡಳದ ಹಳೆಯ ಆವರಣದಲ್ಲಿಯ ಸಿಬಿಎಸ್‍ಇ ಶಾಲೆಯ ಮೈದಾನದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ಬೈಸಿಕಲ್, ದ್ವಿಚಕ್ರ ವಾಹನಗಳ ಮೂಲಕ ಶೋಭಾಯಾತ್ರೆ ನಡೆಸಿದರು. ನಗರದ ವಿವಿಧ ಹಿಂದೂ ಸಂಘಟನೆಗಳು ಇದಕ್ಕೆ ಸಾಥ್ ನೀಡಿದರು. ಶ್ರೀರಾಮ ಜೈಕಾರ ಆಕಾಶದೆತ್ತರಕ್ಕೆ ಮೊಳಗಿತು. ಶೋಭಾಯಾತ್ರೆಯು ಮರಳಿ ಮತ್ತೆ ಸಿಬಿಎಸ್‍ಇ ಶಾಲೆಯ ಆವರಣಕ್ಕೆ ಬಂದು ಕೊನೆಗೊಂಡಿತು. ಬಜರಂಗ ದಳದ ಜಿಲ್ಲಾ ಘಟಕದ ಉಪಾಧ್ಯಕ್ಷ ಅಜಿತ ಪಾರಳೆ, ರಾಜು ಪುರಂತ ಮಾತನಾಡಿದರು.

ಮಂಡಳದ ಉಪಾಧ್ಯಕ್ಷ ಆನಂದ ಗಿಂಡೆ, ಅಶೋಕ ಪೂಜಾರಿ, ಸಂಚಾಲಕ ಚಂದ್ರಕಾಂತ ತಾರಳೆ, ಭರತ ಕುರಬೆಟ್ಟಿ, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಸಮೀರ ಬಾಗೇವಾಡಿ, ಶೇಖರ ಪಾಟೀಲ, ಸಚಿನ ಹಾಲಪ್ಪನವರ, ಪ್ರವೀಣ ಪಾಟೀಲ, ಅವಿನಾಶ ಪಾಟೀಲ, ಗಣೇಶ ಖಡೇದ, ಸಿಇಒ ಸಿದ್ಧಗೌಡ ಪಾಟೀಲ, ಪ್ರಾಚಾರ್ಯ ಉಮೇಶ ಪಾಟೀಲ, ರುದ್ರಕುಮಾರ ಕೋಠಿವಾಲೆ, ಸಂತೋಷ ಕೋಠಿವಾಲೆ, ರಾಹುಲ ಕೋಠಿವಾಲೆ, ರೋಹನ ಕೋಠಿವಾಲೆ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಎನ್‍ಸಿಸಿ ಕ್ಯಾಡೆಟ್‍ಗಳು, ವಿವಿಧ ಸಂಘಟನೆಗಳ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT