ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕಮರಿ: ‘ಪರೀಕ್ಷೆಗೆ ಭಯ ಪಡುವ ಅಗತ್ಯವಿಲ್ಲ’

Last Updated 5 ಫೆಬ್ರುವರಿ 2023, 6:10 IST
ಅಕ್ಷರ ಗಾತ್ರ

ಕಕಮರಿ: ‘ಮನಸ್ಸಿನ ಶಕ್ತಿ ದೇಹದ ಶಕ್ತಿಗಿಂತ ಬಲಿಷ್ಠ. ಅದು ಇದ್ದರೆ ಜಗತ್ತಿನಲ್ಲಿ ಎಲ್ಲವನ್ನೂ ಸಾಧಿಸಬಹುದು. ಅದಕ್ಕೆ ಬಡವ– ಶ್ರೀಮಂತ ಎನ್ನುವ ಭೇದಭಾವ ಇಲ್ಲ’ ಎಂದು ಕಕಮರಿ ಗುರುದೇವಾಶ್ರಮದ ಆತ್ಮಾರಾಮ್ ಸ್ವಾಮೀಜಿ ಹೇಳಿದರು.

ಸಮೀಪದ ಕೊಟ್ಟಲಗಿ ಸಿದ್ಧೇಶ್ವರ ಆಂಗ್ಲ ಮಾಧ್ಯಮ ಶಾಲೆಯ 11ನೇ ವಾರ್ಷಿಕ ಸ್ನೇಹ ಸಮ್ಮಿಲನ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭ ಮತ್ತು ಮಕ್ಕಳಿಂದ ತಂದೆ– ತಾಯಿಗಳ ಪಾದಪೂಜೆ ಕಾರ್ಯಕ್ರಮದದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳಿಗೆ ಅಂಕಗಳು ಮಹತ್ವದ್ದು. ಆದರೆ ಅಂಕಗಳೇ ಜೀವನವಲ್ಲ. ಅಂಕಗಳನ್ನು ಪಡೆದ ಮಾತ್ರಕ್ಕೆ ಬುದ್ಧಿವಂತರಾಗುವುದಿಲ್ಲ. ತಮ್ಮಲ್ಲಿರುವ ಶಕ್ತಿಯನ್ನು ತಿಳಿದುಕೊಳ್ಳುವುದು ಬುದ್ಧಿವಂತಿಕೆ’ ಎಂದರು.

‘ಪರೀಕ್ಷೆಗ ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆ ಎಂಬುವುದು ಜೀವನದ ಒಂದು ಭಾಗ ಮಾತ್ರ. ಆಸಕ್ತಿ, ಗುರಿಯೊಂದಿಗೆ ಪರಿಶ್ರಮ ಪಟ್ಟರೆ ಯಶಸ್ವಿಯಾಗಬಹುದು. ಜೀವನದಲ್ಲಿ ಒತ್ತಡ ಇದ್ದಾಗ ನಾವು ಮಾಡುವ ಕೆಲಸದ ಬಗ್ಗೆ ಗಮನವಿರುತ್ತದೆ. ಆದರೆ ಒತ್ತಡವೇ ಜೀವನವಾಗಬಾರದು’ ಕರೆ ನೀಡಿದರು.

ಸಿವಿಲ್ ನ್ಯಾಯಾಧೀಶರಾಗಿ ನೇಮಕವಾದ ಮಹಾಂತೇಶ ಚೌಲಗಿ ಮಾತನಾಡಿ, ‘ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳುವ ಮಹತ್ವಾಕಾಂಕ್ಷೆ ಹೊಂದಿರಬೇಕು’ ಎಂದರು.

ಪಿಕೆಪಿಎಸ್ ಅಧ್ಯಕ್ಷ ಅಪ್ಪಾಸಾಬ್‌ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಿದರಾಯ ಯಲಡಗಿ, ಕಲ್ಮೇಶ ಶಿವರಾಯಗೋಳ, ಆರ್‌ಎಸ್‍ಪಿ ಸಮೂಹ ಅಥಣಿಯ ಸ್ಥಾಪಕ ರವಿ ಪೂಜಾರಿ, ಐಗಳಿ ಪಿಎಸ್‍ಐ ಶಿವಾಜಿ ಪವಾರ, ಡಾ.ಶರದ್ ಪವಾರ, ಡಾ.ರವಿ ಸಂಖ, ಸುರೇಶ ತೇಲಿ, ಸಣ್ಣಪ್ಪ ದಾನಪ್ಪಗೋಳ, ಮಹೇಶ ಪೋಪಡಿ, ಪ್ರಶಾಂತಗೌಡ ಪಾಟೀಲ, ಸಿದ್ದರಾಮ ಹಿಪ್ಪರಗಿ ಸೇರಿದಂತೆ ಅನೇಕರು ಇದ್ದರು. ಎಂ.ಎಸ್.ಬಡಚಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT