ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೂಡಿ ಬಾಳುವುದನ್ನು ಕಲಿಸುವ ಎನ್‌ಎಸ್‌ಎಸ್‌’

Last Updated 3 ಫೆಬ್ರುವರಿ 2020, 14:14 IST
ಅಕ್ಷರ ಗಾತ್ರ

ಅಥಣಿ: ‘ಕೂಡಿ ಬಾಳುವುದು, ಕೆಲಸ ಮಾಡುವುದು ಹಾಗೂ ಮಾಹಿತಿ ಹಂಚುವುದನ್ನು ಎನ್.ಎಸ್.ಎಸ್. ಘಟಕವು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ. ಸೇವಾ ಮನೋಭಾವ ಬೆಳೆಸುತ್ತದೆ’ ಎಂದು ಆರೂಢ ಜ್ಯೋತಿ ಶಿಕ್ಷಣ ಸಮೂಹ ಅಧ್ಯಕ್ಷ ಎಸ್.ಎಂ. ನಾಯಿಕ ಹೇಳಿದರು.

ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಅಥಣಿಯ ಕೆ.ಎ. ಲೋಕಾಪೂರ ಪದವಿ ಕಾಲೇಜಿನ ಎನ್.ಎಸ್.ಎಸ್. ಘಟಕದಿಂದ ಹಮ್ಮಿಕೊಂಡಿದ್ದ ಎನ್‌ಎಸ್‌ಎಸ್‌ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸಿವೆ. ಎನ್‌ಎಸ್‌ಎಸ್‌ ಘಟಕದವರು ಅವುಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜನರಿಗೆ ಅಗತ್ಯ ಮಾಹಿತಿ ನೀಡಬೇಕು’ ಎಂದರು.

ಜೆ.ಇ. ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ ಮಾತನಾಡಿದರು.

ಉಪ ಪ್ರಾಚಾರ್ಯ ಗಿರೀಶ ಕುಲಕರ್ಣಿ, ಎನ್.ಎಸ್.ಎಸ್. ಘಟಕದ ಸಂಯೋಜನಾಧಿ ಎಸ್.ಎ. ಗಡಗೆ, ಶಿಕ್ಷಕರಾದ ರಾಮಚಂದ್ರ ನಾಯಿಕ, ಬಾಳೇಶ ಬಮನಾಳೆ, ಯೋಗೇಶ ಕುಲಕರ್ಣಿ, ಗೌರೀಶ ದೀಕ್ಷಿತ, ವಿ.ಎಂ. ದೇಶಪಾಂಡೆ, ಸಾಗರ ಕಟಗೇರಿ, ಸಂತೋಷ ಬಡಕಂಬಿ, ಎಂ.ಎ. ಗುಡ್ಡಾಪೂರ, ರಂಜಿತ ಪವಾರ ದೇಸಾಯಿ, ರಾಜು ಕಾಂಬಳೆ, ರೂಪಾ ಹಳ್ಳದಮಳ, ಹೀನಾ ಸನದಿ ಇದ್ದರು.

ಪದವಿ ಕಾಲೇಜಿನ ಪ್ರಾಚಾರ್ಯ ಆರ್.ಎಂ. ದೇವರಡ್ಡಿ ಸ್ವಾಗತಿಸಿದರು. ಬಿ.ಪಿ. ಗುಂಡಾ ನಿರೂಪಿಸಿದರು. ನೀಲೇಶ ಝರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT