ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಾಲು ಉತ್ಪಾದಕರಿಗೆ ₹1 ಹೆಚ್ಚುವರಿ ದರ

Last Updated 1 ಫೆಬ್ರುವರಿ 2020, 9:42 IST
ಅಕ್ಷರ ಗಾತ್ರ

ಬೆಳಗಾವಿ: ಎಮ್ಮೆ ಹಾಗೂ ಆಕಳು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಕನಿಷ್ಠ ದರವನ್ನು ಪ್ರತಿ ಲೀಟರ್‌ಗೆ ₹1 ಹೆಚ್ಚಿಸಲು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ತೀರ್ಮಾನಿಸಿದೆ. ಹೊಸ ದರವು ಫೆಬ್ರುವರಿ 1ರಿಂದಲೇ ಜಾರಿಯಾಗಲಿದೆ.

ಪ್ರಸ್ತುತ, ಎಮ್ಮೆ ಹಾಲಿಗೆ ಪ್ರತಿ ಲೀಟರ್‌ಗೆ ₹34.25 ನೀಡಲಾಗುತ್ತಿತ್ತು. ಇದರ ಜೊತೆಗೆ ಸರ್ಕಾರದಿಂದ ₹5 ಪ್ರೋತ್ಸಾಹ ಧನ ಸಿಗುತ್ತಿತ್ತು. ಹೊಸ ದರ ₹1 ಹೆಚ್ಚಳವನ್ನು ಸೇರಿಸಿದರೆ ಪ್ರತಿ ಲೀಟರ್‌ಗೆ ಕನಿಷ್ಠ ₹40.25 ರೈತರಿಗೆ ಸಿಗಲಿದೆ. ಇದೇ ರೀತಿ ಆಕಳು ಹಾಲಿಗೆ ಪ್ರಸ್ತುತ, ಪ್ರತಿ ಲೀಟರ್‌ಗೆ ₹24 ನೀಡಲಾಗುತ್ತಿತ್ತು. ಸರ್ಕಾರದ ₹5 ಪ್ರೋತ್ಸಾಹ ಧನ ಸಿಗುತ್ತಿತ್ತು. ಹೊಸ ದರ ₹1 ಹೆಚ್ಚಳದಿಂದಾಗಿ ಪ್ರತಿ ಲೀಟರ್‌ಗೆ ಕನಿಷ್ಠ ₹30 ದೊರೆಯಲಿದೆ ಎಂದು ಮ್ಯಾನೇಜರ್‌ ಜಯಪ್ರಕಾಶ ಮನ್ನೇರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT