ಬೆಳಗಾವಿ: ಪಲ್ಲಕ್ಕಿ ಉತ್ಸವ

ಕಡಬಿ (ಬೆಳಗಾವಿ ಜಿಲ್ಲೆ): ‘ಸಾಧು– ಸಂತರ ಮಾರ್ಗದರ್ಶನದಲ್ಲಿ ನಡೆದರೆ ಜೀವನ ಸಾರ್ಥಕವಾಗುತ್ತದೆ’ ಎಂದು ಜ್ಞಾನೇಶ್ವರ ಮಹಾರಾಜರು ಹೇಳಿದರು.
ಇಲ್ಲಿನ ಮಡಿವಾಳೇಶ್ವರ ಮಠದಲ್ಲಿ ಏಕಾದಶಿ ಪ್ರಯುಕ್ತ ನಡೆದ ಪಾಂಡುರಂಗನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವೇದ, ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತೆ ನಮ್ಮ ಸಂಸ್ಕೃತಿ ಮೌಲ್ಯಯುತವಾಗಿದೆ. ಸಾಂಸ್ಕೃತಿಕವಾಗಿ ಭಾರತವು ಶ್ರೀಮಂತ ರಾಷ್ಟ್ರವಾಗಿದೆ’ ಎಂದರು.
ಪಾಂಡುರಂಗ ಮಹಾರಾಜರು, ಹಣಮಂತ ಹೊಸಟ್ಟಿ, ಕೃಷ್ಣಾ ಕುರಬಗಟ್ಟಿ, ರಾಜಶೇಖರ ಬಾಗಲೆ, ಮಹಾದೇವ ಡೋಳ್ಳಿ, ದುರಗಪ್ಪ ನಡುವಿನ, ಮಹಾವೀರ ಹುಕ್ಕೇರಿ, ಕರೆಪ್ಪ ಮಾಳಕ್ಕನವರ, ಲಕ್ಷ್ಮಣ ಪ್ಯಾಟಿ, ಶಂಕರ ಅಜ್ಜನಕಟ್ಟಿ ಇದ್ದರು.
ಸತತ ಮೂರು ದಿನ ದೇವರನಾಮ ಜಪ, ಕೀರ್ತನೆ, ಭಜನೆ ಕಾರ್ಯಕ್ರಮಗಳು ನಡೆದವು. ಮಂಗಳವಾರ ಗ್ರಾಮದಲ್ಲಿ ಪಲ್ಲಕ್ಕಿ ಉತ್ಸವ ಜರುಗಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.