ಮಂಗಳವಾರ, ಜೂನ್ 28, 2022
25 °C
ಹುಕ್ಕೇರಿ ಕೋವಿಡ್‌ ಆರೈಕೆ ಕೇಂದ್ರಕ್ಕೆ ಭೇಟಿ: ಸಚಿವ ಉಮೇಶ ಕತ್ತಿ ಸಲಹೆ

ಸೋಂಕಿತರು ಆರೈಕೆ ಕೇಂದ್ರಕ್ಕೆ ದಾಖಲಾಗಿ: ಸಚಿವ ಉಮೇಶ ಕತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಕ್ಕೇರಿ: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕನ್ನು ತಡೆಗಟ್ಟುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಬದ್ಧರಾಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದರು.

ಪಟ್ಟಣದ ಹೊರವಲಯದಲ್ಲಿನ ಕೋವಿಡ್ ಕಾಳಜಿ ಕೇಂದ್ರಕ್ಕೆ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬೆಳವಿಯ ಸತ್ಯಪ್ಪ ನಾಯಿಕ ಅವರು ಜಗದೀಶ್ ನಾಯಿಕ ಪರ ನೀಡಿದ 20 ಪಲ್ಲಂಗ್ ಮತ್ತು ಬೆಡ್‌ಶೀಟ್‌ ಸಮೇತ ಗಾದಿ, ಸಚಿವ ಮುರಗೇಶ್ ನಿರಾಣಿ (ಪೌಂಡೇಷನ್) ನೀಡಿದ 30 ಲೀಟರಿನ 50 ಸ್ಯಾನಿಟೈಸರ್ ಕ್ಯಾನ್, ಎಕ್ಸಂಬಾದ ಜೊಲ್ಲೆ ಉದ್ಯೋಗ ಸಮೂಹ
ಸಂಸ್ಥೆಯು ನೀಡಿದ ಮೆಡಿಕಲ್ ಕಿಟ್ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ನೀಡಿದ 500 ಮೆಡಿಕಲ್ ಕಿಟ್ ಅನ್ನು ತಾಲ್ಲೂಕು ಆಡಳಿತಕ್ಕೆ ಹಸ್ತಾಂತರಿಸಿ ಮಾತನಾಡಿದರು.

ಸೋಂಕು ಇದ್ದರೆ ಜನರು ಸ್ವಯಂ ಪ್ರೇರಣೆಯಿಂದ ಕಾಳಜಿ ಕೇಂದ್ರಕ್ಕೆ ಬರಬೇಕು. ಇಲ್ಲವಾದಲ್ಲಿ ಪೊಲೀಸರ ಮೂಲಕ ಕರೆತರಬೇಕಾಗುವುದು. ಇದು ಧಮ್ಕಿ ಅಲ್ಲ, ಮುನ್ನೆಚ್ಚರಿಕೆಯ ಕ್ರಮವೆಂದು ಭಾವಿಸಿ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಇಲ್ಲಿನ ಕೋವಿಡ್ ಕೇರ್ ಸೆಂಟರ್ ಉತ್ತಮವಾಗಿದೆ ಎಂದರು.

ಪುರಸಭೆ ಅಧ್ಯಕ್ಷ ಅಣ್ಣಾಗೌಡ ಪಾಟೀಲ, ಸದಸ್ಯರಾದ ಮಹಾವೀರ ನಿಲಜಗಿ, ಭೀಮಶಿ ಗೋರಖನಾಥ, ಸದಾಶಿವ ಕರೆಪ್ಪಗೋಳ, ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ರಮೇಶ್ ಕುಲಕರ್ಣಿ, ಪರಗೌಡ ಪಾಟೀಲ, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸತ್ಯಪ್ಪ ನಾಯಿಕ, ನೌಕರರ ಸಂಘದ ತಾಲ್ಲೂಕು ಘಟಲದ ಅಧ್ಯಕ್ಷ ಮಹಾಂತೇಶ ನಾಯಿಕ, ಧರ್ಮಸ್ಥಳ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕ ದಿಗ್ಗೇಗೌಡ, ಜಿಲ್ಲಾ ನಿರ್ದೇಶಕ ಟಿ.ಕೃಷ್ಣ, ಯೋಜನಾಧಿಕಾರಿ ಅನಿತಾ, ಮಹಾವೀರ ಬಾಗಿ, ಸಂಜು ಬಸ್ತವಾಡ, ಬೆಳಗಾವಿ ಎಸಿ ರವೀಂದ್ರ ಕರಲಿಂಗನ್ನವರ ಇದ್ದರು.

ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಸ್.ಹಿರೇಮಠ ಸ್ವಾಗತಿಸಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು