ಚಿಕ್ಕೋಡಿಯ ಇಂದಿರಾ ನಗರ ಬಡಾವಣೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರ ಗೋಡೆ ಸಂಪೂರ್ಣ ಹಾಳಾಗಿರುವುದು
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಮುರಿದುಬಿದ್ದಿದೆ
ರಾಮದುರ್ಗ ತಾಲ್ಲೂಕಿನ ಶಿವಪೇಟೆ ಶಾಲೆಯ ಚಾವಣಿ ಹಾರಿಹೋಗಿದೆ
ಸತತವಾಗಿ ಸೋರುತ್ತವೆ
ಪ್ರತಿವರ್ಷ ಖಾನಾಪುರ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಇದರಿಂದ ಹಲವು ಸರ್ಕಾರಿ ಶಾಲೆಗಳ ಕಟ್ಟಡ ಸತತವಾಗಿ ಸೋರುತ್ತವೆ. ನೆಲಹಾಸು ಜಿನುಗುಡುವ ಸನ್ನಿವೇಶ ಕಂಡುಬರುತ್ತವೆ. ಮುಖ್ಯವಾಗಿ ಜಾಂಬೋಟಿ ಗುಂಜಿ ಹೋಬಳಿ ವ್ಯಾಪ್ತಿಯಲ್ಲಿ ಜುಲೈ ಆಗಸ್ಟ್‌ನಲ್ಲಿ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಶಾಲೆಗಳಲ್ಲಿ ಮಕ್ಕಳು ಸಾಕಷ್ಟು ತೊಂದರೆ ಅನುಭಸುತ್ತಾರೆ. ಚಿಗುಳೆ ಅಮಗಾಂವ ಚೋರ್ಲಾ ಮಾನ ಕಣಕುಂಬಿ ಪಾರವಾಡ ಮತ್ತಿತರ ಶಾಲೆಗಳ ತರಗತಿ ಕೊಠಡಿಗಳಲ್ಲಿ ನೆಲದಿಂದ ನೀರು ಹೊರಬರುತ್ತದೆ.