ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಕೆಪಿಎಸ್‌ಗಳು ರೈತರ ಪಾಲಿನ ಸಂಜೀವಿನಿ’

Last Updated 23 ನವೆಂಬರ್ 2020, 8:04 IST
ಅಕ್ಷರ ಗಾತ್ರ

ಹಂದಿಗುಂದ: ‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ಪಿಕೆಪಿಎಸ್) ರೈತರ ಪಾಲಿನ ಸಂಜೀವಿನಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಂಕಷ್ಟದಲ್ಲಿರುವ ಕೃಷಿಕರು ಅವುಗಳಿಂದ ಸಹಾಯ ಪಡೆದು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಹೇಬ ಕುಲಗುಡೆ ಹೇಳಿದರು.

ರಾಯಬಾಗ ತಾಲ್ಲೂಕು ಹಂದಿಗುಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಈಚೆಗೆ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಖಾನಗೌಡ, ‘ಸೊಸೈಟಿಗೆ ಸೇಫ್‌ ಲಾಕರ್ ವ್ಯವಸ್ಥೆ ಕಲ್ಪಿಸಬೇಕು. ರೈತರು ಪಡೆದಿರುವ ಹಸು, ಎಮ್ಮೆ, ಟ್ರ್ಯಾಕ್ಟರ್‌ ಮೇಲಿನ ಸಾಲ ಮನ್ನಾ ಮಾಡಲು ಸರ್ಕಾರದ ಆದೇಶದಂತೆ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಮುಖಂಡ ರಾಮನಗೌಡ ಪಾಟೀಲ, ‘ಪಡಿತರ ಧಾನ್ಯ ಸಂಗ್ರಹಿಸಲು ಗೋದಾಮು, ಸಂಘದ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಆರ್.ಸಿ. ಮಿರ್ಜಿ, ಬಸನಿಂಗಪ್ಪ ಚಿಂಚಲಿ, ಮಹಾಲಿಂಗ ಮರಡಿ, ಬಿ.ಎಸ್. ಘಾಟ್ಯಾಗೊಳ, ಎಂ.ಎಂ. ಅಂದಾನಿ, ಕೆ.ಬಿ. ಮಂಟೂರ, ಲಕ್ಷ್ಮಣ ಚಿನಗುಂಡಿ, ರುದ್ರಪ್ಪ ಭದ್ರಶಟ್ಟಿ, ಮಲ್ಲಪ್ಪ ಬಿಸಗುಪ್ಪಿ, ಶಂಕರ ತಳವಾರ ಇದ್ದರು.

ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಸ್. ನಾಯಿಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT