ಬೆಳಗಾವಿ: ಸಿಎಆರ್ ಬೆಳಗಾವಿ ನಗರ ತಂಡದವರು ಇಲ್ಲಿ ನಗರ ಪೊಲೀಸ್ ಆಯುಕ್ತಾಲಯದಿಂದ ಆಯೋಜಿಸಿದ್ದ ವಾರ್ಷಿಕ ಕ್ರೀಡಾಕೂಟದಲ್ಲಿ ಚಾಂಪಿಯನ್ ಪಟ್ಟ ಪಡೆದುಕೊಂಡರು.

ಮಾರ್ಕೆಟ್, ಖಡೇಬಜಾರ್, ಬೆಳಗಾವಿ ಗ್ರಾಮೀಣ, ಮಹಿಳಾ ವಿಭಾಗ, ಸಂಚಾರ ವಿಭಾಗ ಹಾಗೂ ಸಿಎಆರ್ ತಂಡಗಳು ಉತ್ತಮ ಪ್ರದರ್ಶನ ತೋರಿದವು. ಕ್ರೀಡಾಕೂಟದ ಕೊನೆಯ ದಿನವಾದ ಶುಕ್ರವಾರ ಅಧಿಕಾರಿಗಳಿಗೆ ಆಯೋಜಿಸಿದ್ದ ವಾಲಿಬಾಲ್ ಪಂದ್ಯದಲ್ಲಿ ನಗರ ಪೊಲೀಸ್ ಆಯುಕ್ತರ ತಂಡ ಪ್ರಥಮ ಬಹುಮಾನ ಪಡೆಯಿತು.

ವೈಯಕ್ತಿಕ ವೀರಾಗ್ರಣಿ ಜಂಟಿ ಪ್ರಶಸ್ತಿಯನ್ನು ಸಂತೋಷ ಪೂಜೇರಿ–ರಮೇಶ ಬುರಲಿ ತಮ್ಮದಾಗಿಸಿಕೊಂಡರು. ಕಬಡ್ಡಿಯಲ್ಲಿ ಖಡೇಬಜಾರ್ ಉಪವಿಭಾಗ ಪ್ರಥಮ, ಸಿಎಎಆರ್ ಬೆಳಗಾವಿ ನಗರ ತಂಡ ದ್ವಿತೀಯ, ವಾಲಿಬಾಲ್‌ನಲ್ಲಿ ಸಿಎಆರ್ ಬೆಳಗಾವಿ ನಗರ ತಂಡ ಪ್ರಥಮ, ಖಡೇಬಜಾರ್ ಉಪವಿಭಾಗ ತಂಡ ದ್ವಿತೀಯ ಸ್ಥಾನ ಗಳಿಸಿದವು. ಹಗ್ಗಜಗ್ಗಾಟದಲ್ಲಿ ವಿಶೇಷ ಘಟಕ ಹಾಗೂ ಸಂಚಾರ ಉಪವಿಭಾಗ ತಂಡ ಪ್ರಥಮ ಸ್ಥಾನ, ಖಡೇಬಜಾರ್ ಉಪವಿಭಾಗ ತಂಡ ದ್ವಿತೀಯ ಸ್ಥಾನ ಪಡೆಯಿತು.

ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ. ಬೋರಲಿಂಗಯ್ಯ, ಡಿಸಿಪಿಗಳಾದ ವಿಕ್ರಂ ಅಮಟೆ, ಪಿ.ವಿ. ಸ್ನೇಹಾ, ಎಸಿಪಿ ನಾರಾಯಣ ಭರಮನಿ ಮೊದಲಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.