‘ಆತ್ಮವಿಶ್ವಾಸದಿಂದ ಎಲ್ಲವೂ ಸಾಧ್ಯ’

ಶನಿವಾರ, ಮೇ 25, 2019
32 °C
ಪ್ರತಿಭಾ ಪುರಸ್ಕಾರ ಸಮಾರಂಭ

‘ಆತ್ಮವಿಶ್ವಾಸದಿಂದ ಎಲ್ಲವೂ ಸಾಧ್ಯ’

Published:
Updated:

ಬೆಳಗಾವಿ: ‘ಆತ್ಮವಿಶ್ವಾಸವಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಹೀಗಾಗಿ, ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ತಳಪಾಯವನ್ನು ಶಿಕ್ಷಕರು, ಪಾಲಕರು ಹಾಕಬೇಕು’ ಎಂದು ಹೈದರಾಬಾದ್‌ನ ಉಪಜಿಲ್ಲಾಧಿಕಾರಿ ವೆಂಕಟೇಶ ಧೋತ್ರೆ ಹೇಳಿದರು.

ಖಾಸಬಾಗ ತಾಳೂಕರ ಚಿತ್ರಕಲಾ ಹಾಗೂ ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದಿಂದ ಆಯೋಜಿಸಿದ್ದ 9ನೇ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದರು.

ಸಿಪಿಐ ವಿಜಯ ಶಿನ್ನೂರ ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಸಾಧಿಸುವ ಛಲ ಹೊಂದಿದವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ’ ಎಂದರು.

ವಸತಿನಿಲಯ ಮೇಲ್ವಿಚಾರಕ ಅಜಯ ಹಜೇರಿ ಮಾತನಾಡಿದರು. ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ವೀರಭದ್ರ ಕಾಮಕರ ಅವರಿಗೆ ‘ದೇವಾಂಗ ರತ್ನ’‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಂಜಿನಿಯರ್‌ ನಿರಂಜನ ಕಾರಗಿ, ರಾಷ್ಟ್ರೀಯ ಇನ್‌ಸ್ಪೈರ್‌ ಅವಾರ್ಡ್‌ ವಿಜೇತ ಯುಕೆಎಲ್‌ಎಸ್‌ ಪ್ರೌಢಶಾಲಾ ವಿದ್ಯಾರ್ಥಿ ಪ್ರಸನ್ನ ಉಮೇಶ ಶಿರಹಟ್ಟಿ ಅವರನ್ನು ದೇವಾಂಗ ಸಮಾಜದ ಅಧ್ಯಕ್ಷ ರವಿ ಲೋಲಿ ಹಾಗೂ ಸಮಾಜದ ಹಿರಿಯರು ಗೌರವಿಸಿದರು.

ಪ್ರವೀಣ್ ದೇವಾಂಗ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ನಂತರದ ಕೋರ್ಸ್‌ಗಳು ಮತ್ತು ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು.

ಮುಖಂಡ ಪುಲಕೇಶಿ ತಾಳೂಕರ ಅಧ್ಯಕ್ಷತೆ ವಹಿಸಿದ್ದರು. ತಾಳೂಕರ ಪ್ರತಿಷ್ಠಾನದ ಲಕ್ಷ್ಮಣ ತಾಳೂಕರ, ಪಾಂಡುರಂಗ ಕಾನಡೆ, ಚಂದ್ರಶೇಖರ ತಾಳೂಕರ, ರಾಘವೇಂದ್ರ ತಾಳೂಕರ, ಅಮೃತ ತಾಳೂಕರ, ಶ್ರೀನಿವಾಸ ತಾಳೂಕರ, ಪ್ರವೀಣ ಕಾಮಕರ, ವಿಶ್ವನಾಥ ತಾಳೂಕರ, ಸಂಜು ಹಜೇರಿ, ಅಮರ ಢವಳೆ, ಮಂಜುನಾಥ ಮಕಾಟೆ, ಕಲಾವಿದೆ ಶ್ರಾವಣ ವಾಗೂಕರ ಇದ್ದರು.

ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣರಾಜೇಂದ್ರ ತಾಳೂಕರ ಸ್ವಾಗತಿಸಿದರು. ಚಂದ್ರಗುಪ್ತ ತಾಳೂಕರ ನಿರೂಪಿಸಿದರು. ಪ್ರತಿಷ್ಠಾನದ ಕಾರ್ಯದರ್ಶಿ ಸುಭಾಷ್ ತಾಳೂಕರ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !